ವೀರಾಜಪೇಟೆ, ಮಾ. 10: ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಒಂದು ದಿನದ ರಾಜ್ಯಮಟ್ಟದ ವಾಣಿಜ್ಯಶಾಸ್ತ್ರ ಉತ್ಸವದಲ್ಲಿ ಐದು ಪೈಪೋಟಿಗಳಲ್ಲಿ ಬಹುಮಾನವನ್ನು ಪಡೆದುಕೊಂಡಿದ್ದಾರೆ. “ರೆಸ್ಯುಮ್ ರೈಟಿಂಗ್” ಸ್ಪರ್ಧೆಯಲ್ಲಿ ನರ್ತನಾ (ಅಂತಿಮ ಬಿ.ಕಾಂ) ದ್ವಿತೀಯ ಬಹುಮಾನ, ಬೆಸ್ಟ್ ಎಕ್ಸಿಕ್ಯುಟಿವ್ ಲುಕ್ ಸ್ಪರ್ಧೆಯಲ್ಲಿ ಅಮೃತ (ಪ್ರಥಮ ಬಿ.ಬಿ.ಎ) ದ್ವಿತೀಯ ಬಹುಮಾನ, ಅಣುಕು ಸಂದರ್ಶನ ಸ್ಪರ್ಧೆಯಲ್ಲಿ ಪೊನ್ನಣ್ಣ ಎ.ಎಂ. (ಅಂತಿಮ ಬಿ.ಕಾಂ) ದ್ವಿತೀಯ ಬಹುಮಾನ, ಬಿಸ್ನೆಸ್ ಸ್ಟಾರ್ಟ್ ಅಪ್ ಸ್ಪರ್ಧೆಯಲ್ಲಿ ಕುಶಾಲಪ್ಪ, ಕವನ್ ನಾಣಯ್ಯ, ವಿಲ್ಮ ಹಾಗೂ ವಿನೋದ್ ದ್ವಿತೀಯ ಬಹುಮಾನ ಮತ್ತು ಟ್ರೆಝರ್ ಹಂಟ್ ಸ್ಪರ್ಧೆಯಲ್ಲಿ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿಯರಾದ ಮೇಘನಾ ಮತ್ತು ಹರ್ಷಿತಾ ಪ್ರಥಮ ಬಹುಮಾನವನ್ನು ಪಡೆದುಕೊಂಡರು.