ಮಡಿಕೇರಿ, ಮಾ. 10: ಮೈಸೂರು ಮಹಾನಗರ ಪಾಲಿಕೆಯ ವಿಪಕ್ಷನಾಯಕರಾಗಿ ಬಿಜೆಪಿಯ ಕಾರ್ಪೋರೇಟರ್ ಕೊಡಗು ಮೂಲದ ಮಾಳೇಟಿರ ಯು. ಸುಬ್ಬಯ್ಯ ಆಯ್ಕೆಗೊಂಡಿದ್ದಾರೆ. ಪಾಲಿಕೆಯ ವಿಪಕ್ಷವಾಗಿರುವ ಬಿಜೆಪಿಯ 22 ಮಂದಿ ಸದಸ್ಯರ ಪೈಕಿ ಮಾಳೇಟಿರ ಸುಬ್ಬಯ್ಯ ಅವರು ವಿಜಯನಗರ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ.
ಈ ಹಿಂದೆ ಹಿನಕಲ್ ಗಾ.ಪಂ. ಸದಸ್ಯರಾಗಿಯೂ ಅನುಭವ ಹೊಂದಿರುವ ಇವರು, ಕಾನೂನು ಪದವಿಯೊಂದಿಗೆ ಮೈಸೂರಿನಲ್ಲಿ ವಕೀಲವೃತ್ತಿ ನಿರ್ವಹಿಸುವ ಮೂಲಕ ಅಲ್ಲಿನ ವಕೀಲರ ಸಂಘದ ಖಜಾಂಚಿಯಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಬಿಜೆಪಿಯ ಸಕ್ರೀಯ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದಾರೆ. ಎಂ.ಯು. ಸುಬ್ಬಯ್ಯ ಮೂಲತಃ ಗೋಣಿಕೊಪ್ಪಲು ಸಮೀಪದ ಕೊಳತ್ತೋಡು ಬೈಗೋಡುವಿನ ಖಾಯಂ ನಿವಾಸಿಯಾಗಿದ್ದು, ಪ್ರಸ್ತುತ ಮೈಸೂರಿನ ವಿಜಯನಗರದಲ್ಲಿ ನೆಲೆಸಿದ್ದಾರೆ.