ಮಡಿಕೇರಿ, ಮಾ. 9: ಹಿಮಾಲಯ ಪರ್ವತ ಶ್ರೇಣಿಯಿಂದ ವಿಶಾಲ ಹಿಂದೂ ಮಹಾ ಸಾಗರದ ವರೆಗಿನ ಭೂಮಿ ಭಾರತ ಮಾತೆಯ ತಪೋ ನೆಲವಾಗಿದ್ದು, ಭಾರತಮಾತೆ ನೆಲೆನಿಂತ ನಾಡು ಹಿಂದೂಸ್ಥಾನವಾಗಿ ಗುರುತಿಸಿಕೊಂಡಿದೆ ಎಂದು ಸನಾತನ ಸಂಸ್ಥೆಯ ಧರ್ಮ ಪ್ರಚಾರಕಿ ದೀಪಾ ತಿಲಕ್ ವಿಷಾದÀ ವ್ಯಕ್ತಪಡಿಸಿದರು.
ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಮಡಿಕೇರಿಯ ಓಂಕಾರ ಸದÀನದಲ್ಲಿ ಆಯೋಜಿಸಿದ್ದ ಧರ್ಮ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಸನಾತನ ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರದ ಪರಿಕಲ್ಪನೆ ಬಗ್ಗೆ ಪ್ರವಚನ ನೀಡಿದ ದೀಪಾ ತಿಲಕ್, ಸನಾತನ ಸಂಸ್ಥೆ ಹಿಂದೂಗಳಲ್ಲಿ ಧರ್ಮ ಜಾಗೃತಿಯ ಬಗ್ಗೆ ಪ್ರಚಾರ ನಡೆಸಿ ಅವರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಆದರೆ ಇದನ್ನು ಸಹಿಸದ ಕೆಲವು ಶಕ್ತಿಗಳು ಸನಾತನ ಸಂಸ್ಥೆಯ ವಿರುದ್ಧ ಅಪಪ್ರಚಾರ ನಡೆಸುವ ಮೂಲಕ ಸಂಸ್ಥೆಯನ್ನು ನಿರ್ಬಂಧ ಹೇರಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ವಕೀಲ ಪಿ. ಕೃಷ್ಣಮೂರ್ತಿ, ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖ್ ಶಿವರಾಮ್ ಹಾಜರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖರಾದ ಪಿ.ಎಂ. ರವಿಚಂದ್ರ ಅವರು ಸಮಿತಿ ಕಳೆದ ಹತ್ತು ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಧರ್ಮ ಸಭೆಗಳ ಬಗ್ಗೆ ಮಾಹಿತಿ ನೀಡಿದರು. ವೇದಮೂರ್ತಿಗಳಾದ ಉದಯ್ ಕುಮಾರ್ ಮತ್ತು ಸುಬ್ರಮಣ್ಯ ಕುಮಾರ್ ವೇದ ಮಂತ್ರ ಪಠಿಸಿದರು.
ಸಭಾಂಗಣದಲ್ಲಿ ಹಿಂದೂ ಧರ್ಮದ ಕುರಿತ ವಿವಿಧ ಆಚರಣೆಗಳ ಭಿತ್ತಿ ಫಲಕಗಳನ್ನು ಅನಾವರಣ ಮಾಡಲಾಗಿತ್ತು.