ಗೋಣಿಕೊಪ್ಪ. ಮಾ. 10: ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಬೋಧಕೇತರ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್.ಕೆ. ಚೆಲುವ ಅವÀರು ಫೆಬ್ರವರಿ 29ರಂದು ನಿವೃತ್ತಿ ಹೊಂದಿದ್ದು, ಇವರಿಗೆ ಕಾಲೇಜಿನ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. 1980ರಲ್ಲಿ ಕಾವೇರಿ ಕಾಲೇಜಿನಲ್ಲಿ ಸೇವೆಗೆ ಸೇರಿದ್ದು 39 ವರ್ಷಗಳ ಕಾಲ ಸುದೀರ್ಘ ಸೇವೆಗೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ವಿ. ಕುಸುಮಾಧರ್ ಚೆಲುವ ಅವರನ್ನು ಸನ್ಮಾನಿಸಿದರು. ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಮಾತನಾಡಿದರು. ಉಪ ಪ್ರಾಂಶುಪಾಲ ಡಾ. ಎ.ಎಸ್. ಪೂವಮ್ಮ, ಅಧೀಕ್ಷಕಿ ಹೆಚ್. ಕೆ. ಸೀತಾಲಕ್ಷ್ಮಿ ಹಾಗೂ ಭೋದಕ-ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.