ಸುಂಟಿಕೊಪ್ಪ, ಮಾ. 10: ಇಲ್ಲಿನ ವರ್ಕ್‍ಶಾಪ್ ಮಾಲೀಕರ ಸಂಘದ ವತಿಯಿಂದ ಗರಗಂದೂರಿನ ಶ್ರೀ ಕುರುಂಭ ಭಗವತಿ ಭಧ್ರಕಾಳಿ ದೇವಸ್ಥಾನದ 13ನೇ ವರ್ಷದ ಮಹೋತ್ಸವ ಮತ್ತು ದೇವಿಯ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ತೂಗುದೀಪ ಹಾಗೂ ಗಂಟೆಯನ್ನು ನೀಡಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ವಿ.ಎ. ಸಂತೋಷ್, ಗೌರವ ಅಧ್ಯಕ್ಷ ಭಾಸ್ಕರ, ಖಜಾಂಚಿ ಕೆ.ಪಿ. ವಿನೋದ್, ಉಪಾಧ್ಯಕ್ಷ ರಾಮಕೃಷ್ಣ, ರಾಜು, ಕಾರ್ಯದರ್ಶಿ ವಿನು, ಸತೀಶ, ವಾಸು ಇದ್ದರು.