ವೀರಾಜಪೇಟೆ, ಮಾ. 10: ವಿದ್ಯಾರ್ಥಿ ಜೀವನದಲ್ಲಿ ಕಲಿಕೆ ಎಷ್ಟೂ ಮುಖ್ಯವೊ ಅಷ್ಟೆ ಮುಖ್ಯ ಪೈಪೋಟಿ ಯೊಂದಿಗೆ ಕಲಿಯುವುದು ಎಂಬತೆ ಎಂದು ಕಾವೇರಿ ಶಿಕ್ಷಣ ಸಂಸ್ಥೆಯ ನಿರ್ದೇಶಕÀ ಎಂ. ಜಿ. ಮುತ್ತಣ್ಣ ಅಭಿಮತ ವ್ಯಕ್ತಪಡಿಸಿದರು.
ಕುಕ್ಲೂರು ಶಾಲೆಯ ಆವರಣ ದಲ್ಲಿ ಜರುಗಿದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಮಕ್ಕಳ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ಪಡೆಯುವಂತಾಗಬೇಕು. ಉತ್ತಮ ಪ್ರಜೆಗಳಾಗಿ ರೂಪು ಗೊಂಡಾಗ ಸಮಾಜವು ನಿಮ್ಮನ್ನು ಗುರುತಿಸುತ್ತದೆÉ ಎಂದು ಹೇಳಿದರು.
ಕಾವೇರಿ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಕಾವೇರಿ ಮುತ್ತಣ್ಣ, ಶಿಕ್ಷಕರು ಮಕ್ಕಳನ್ನು ರೂಪಿಸುವ ಗುರುಗಳಾದರೆ ಶಿಕ್ಷಣ ಸಂಸ್ಥೆಯು ವಿದ್ಯಾ ದೇಗುಲದಂತೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾವೇರಿ ಶಾಲೆಯ ಅಧ್ಯಕ್ಷ ಸುದೇಶ್ ಬಿ.ಎಸ್. ಅಧ್ಯಕ್ಷತೆ ವಹಿಸಿ ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ಶಾಲೆಯಲ್ಲಿ ಕಲಿಕೆಯು ಉತ್ತಮ ಮಟ್ಟದಲ್ಲಿದೆ ಎಂದು ಹೇಳಿದರು.
ಕಾವೇರಿ ಶಾಲೆಯ ವಿನೋದ್ ಪಿ.ಎನ್. ವಾರ್ಷಿಕ ವರದಿ ವಾಚಿಸಿ ದರು, ಸಮಾರಂಭದ ವೇದಿಕೆಯಲ್ಲಿ ಕಾವೇರಿ ಶಾಲೆಯ ಮುಖ್ಯೋ ಪಾಧ್ಯಾಯಿನಿ ಪ್ರಮೀಳ ಎಂ.ಬಿ. ಉಪಸ್ಥಿತರಿದ್ದರು. ಪಠ್ಯೇತರ ಚಟುವಟಿಕೆಯಲ್ಲಿ ಅಂಕಗಳಿಸಿದ ಮತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಶಾಲೆಯ ಆವರಣದಲ್ಲಿ ವಿದ್ಯಾರ್ಥಿ ಗಳಿಂದ ಉಪಹಾರ ಮೇಳ, ವಿಜ್ಞಾನ ಮೇಳ, ಕರಕುಶಲ ವಸ್ತುಗಳು ಗಮನ ಸೆಳೆದವು. ವಿದ್ಯಾರ್ಥಿಗಳಿಂದ ವಿವಿಧತೆಯಲ್ಲಿ ಏಕತೆ ಸಾರುವ ನೃತ್ಯ ರೂಪಕವು ಪ್ರೇಕ್ಷಕರ ಗಮನ ಸೆಳೆಯಿತು. ಸಾಂಸ್ಕøತಿಕ ಕಾರ್ಯಕ್ರಮ. ಕರಾಟೆ, ಯೋಗ ಪ್ರದರ್ಶನ ನಡೆಯಿತು.