ಸುಳ್ಯ: 40 ದಿನಗಳ ರಾಜ್ಯ ಮಟ್ಟದ ರಂಗ ಕಮ್ಮಟದ ಮೂಲಕ ಅರೆಭಾಷೆ ನಾಟಕ ‘ಸಾಹೇಬ್ರು ಬಂದವೆ’ ತಯಾರಾಗುತ್ತಿದೆ.

ವಿಶೇಷ ಎಂದರೆ ಬೇರೆ-ಬೇರೆ ಭಾಷೆ ಮಾತನಾಡುವ ವಿವಿಧ ಜಿಲ್ಲೆಯ ಐದು ಮಂದಿ ಅರೆಭಾಷೆಯನ್ನು ಅಭ್ಯಸಿಸಿ ಈ ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ. ಒಟ್ಟು ಹದಿನೈದು ಮಂದಿಯ ತಂಡ.

ಪ್ರಸಿದ್ಧ ನಾಟಕಕಾರ ನಿಕೊಲಾಮ್ ಗೊಗೊಲ್‍ನ ‘ದಿ ಇನ್ಸ್‍ಪೆಕ್ಟರ್ ಜನರಲ್’ ನಾಟಕದಿಂದ ಕೆ.ವಿ.ಸುಬ್ಬಣ್ಣ ಮತ್ತು ಕೆ.ವಿ.ಅಕ್ಷರ ಅವರು ಕನ್ನಡಕ್ಕೆ ಅನುವಾದಿಸಿರುವ ‘ಸಾಹೇಬರು ಬರುತ್ತಾರೆ’ ನಾಟಕ. ಇದನ್ನು ಪತ್ರಕರ್ತ ಜಯಪ್ರಕಾಶ್ ಕುಕ್ಕೇಟಿ ಅವರು ಅರೆಭಾಷೆಗೆ ಅನುವಾದಿಸಿದ್ದಾರೆ. ಅರೆಭಾಷೆಯಲ್ಲಿ ‘ಸಾಹೇಬರು ಬಂದವೆ’ ನಾಟಕ ರಂಗ ಮಾಂತ್ರಿಕ ಜೀವನ್ ರಾಮ್ ಸುಳ್ಯ ಅವರ ನಿರ್ದೇಶನದಲ್ಲಿ ರಂಗದ ಮೇಲೆ ಬರಲಿದೆ.

ಯಾವನೋ ಒಬ್ಬನನ್ನು ಇನ್ನೊಬ್ಬ ಎಂದು ಭಾವಿಸಿ ಗೊಂದಲ ಪಡುವ, ತಾನಲ್ಲದ್ದನ್ನು ತಾನು ಎಂದು ತೋರಿಸುವ, ಕೊನೆಗೆ ಯಾರೋ ಹೋಗಿ ಯಾರೋ ಆಗುವ ದೃಶ್ಯಗಳಿಂದ ಹೆಣೆದುಕೊಂಡಿದೆ ನಾಟಕದ ಚಿತ್ರಣ. ನಾಟಕ ನಿಜವಾಗಿ ಐದು ದಶಕಗಳ ಹಿಂದಿನ ಸಮಯ, ಸಂದರ್ಭದ ಕಥಾ ವಸ್ತುವಾದರೂ ಈಗ ಮಾತ್ರ ಪ್ರಸ್ತುತತೆಯನ್ನು ಪ್ರಚುರಪಡಿಸುತ್ತದೆ. ಈಗಿನ ರಾಜಕೀಯ, ಸಾಮಾಜಿಕ ವ್ಯವಸ್ಥೆಯನ್ನು ಸ್ಪಷ್ಟಪಡಿಸುತ್ತದೆ. ಹಣ, ಅಂತಸ್ತು, ಭ್ರಷ್ಟ ವ್ಯವಸ್ಥೆಗಳ ಹಿಂದೆ ಓಡಾಡುವ ಇಂದಿನ ಒಂದು ವರ್ಗವೇ ಇಡೀ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದೆಯಲ್ಲ ಅದರ ಅಣಕು ಈ ನಾಟಕದಲ್ಲಿ ನಿರೂಪಿಸಲ್ಪಡುತ್ತದೆ. ಹಿಂದೆಲ್ಲಾ ಪತ್ರದ ಮೂಲಕವೇ ಮಾಹಿತಿ ರವಾನೆ ಆಗಿ ವಿಚಾರ ದೊರಕುತ್ತಿದ್ದವು. ಆದರೆ ಇಂದಿನ ಮಾಹಿತಿ ತಂತ್ರಜ್ಞಾನದಿಂದ ಉದ್ಭವಿಸಿರುವ ವಾಟ್ಸಾಪ್ ಸಹಿತ ಇತರ ಮಾಹಿತಿ ರವಾನಿಸುವ ಮೂಲಗಳಿಂದ ಮಾಹಿತಿ ಸೋರಿಕೆ ಆಗುವ ಬಗ್ಗೆಯೂ ಇರುವ ಕಾಳಜಿಯ ಕಳಕಳಿಯನ್ನು ನಿರ್ದೇಶಕರು ಸೇರಿಸಿಕೊಂಡಿದ್ದಾರೆ. ಸುಮಾರು 105 ನಿಮಿಷಗಳ ಕಾಲದ ನಾಟಕದಲ್ಲಿ ಸುಳ್ಯ: 40 ದಿನಗಳ ರಾಜ್ಯ ಮಟ್ಟದ ರಂಗ ಕಮ್ಮಟದ ಮೂಲಕ ಅರೆಭಾಷೆ ನಾಟಕ ‘ಸಾಹೇಬ್ರು ಬಂದವೆ’ ತಯಾರಾಗುತ್ತಿದೆ.

ವಿಶೇಷ ಎಂದರೆ ಬೇರೆ-ಬೇರೆ ಭಾಷೆ ಮಾತನಾಡುವ ವಿವಿಧ ಜಿಲ್ಲೆಯ ಐದು ಮಂದಿ ಅರೆಭಾಷೆಯನ್ನು ಅಭ್ಯಸಿಸಿ ಈ ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ. ಒಟ್ಟು ಹದಿನೈದು ಮಂದಿಯ ತಂಡ.

ಪ್ರಸಿದ್ಧ ನಾಟಕಕಾರ ನಿಕೊಲಾಮ್ ಗೊಗೊಲ್‍ನ ‘ದಿ ಇನ್ಸ್‍ಪೆಕ್ಟರ್ ಜನರಲ್’ ನಾಟಕದಿಂದ ಕೆ.ವಿ.ಸುಬ್ಬಣ್ಣ ಮತ್ತು ಕೆ.ವಿ.ಅಕ್ಷರ ಅವರು ಕನ್ನಡಕ್ಕೆ ಅನುವಾದಿಸಿರುವ ‘ಸಾಹೇಬರು ಬರುತ್ತಾರೆ’ ನಾಟಕ. ಇದನ್ನು ಪತ್ರಕರ್ತ ಜಯಪ್ರಕಾಶ್ ಕುಕ್ಕೇಟಿ ಅವರು ಅರೆಭಾಷೆಗೆ ಅನುವಾದಿಸಿದ್ದಾರೆ. ಅರೆಭಾಷೆಯಲ್ಲಿ ‘ಸಾಹೇಬರು ಬಂದವೆ’ ನಾಟಕ ರಂಗ ಮಾಂತ್ರಿಕ ಜೀವನ್ ರಾಮ್ ಸುಳ್ಯ ಅವರ ನಿರ್ದೇಶನದಲ್ಲಿ ರಂಗದ ಮೇಲೆ ಬರಲಿದೆ.

ಯಾವನೋ ಒಬ್ಬನನ್ನು ಇನ್ನೊಬ್ಬ ಎಂದು ಭಾವಿಸಿ ಗೊಂದಲ ಪಡುವ, ತಾನಲ್ಲದ್ದನ್ನು ತಾನು ಎಂದು ತೋರಿಸುವ, ಕೊನೆಗೆ ಯಾರೋ ಹೋಗಿ ಯಾರೋ ಆಗುವ ದೃಶ್ಯಗಳಿಂದ ಹೆಣೆದುಕೊಂಡಿದೆ ನಾಟಕದ ಚಿತ್ರಣ. ನಾಟಕ ನಿಜವಾಗಿ ಐದು ದಶಕಗಳ ಹಿಂದಿನ ಸಮಯ, ಸಂದರ್ಭದ ಕಥಾ ವಸ್ತುವಾದರೂ ಈಗ ಮಾತ್ರ ಪ್ರಸ್ತುತತೆಯನ್ನು ಪ್ರಚುರಪಡಿಸುತ್ತದೆ. ಈಗಿನ ರಾಜಕೀಯ, ಸಾಮಾಜಿಕ ವ್ಯವಸ್ಥೆಯನ್ನು ಸ್ಪಷ್ಟಪಡಿಸುತ್ತದೆ. ಹಣ, ಅಂತಸ್ತು, ಭ್ರಷ್ಟ ವ್ಯವಸ್ಥೆಗಳ ಹಿಂದೆ ಓಡಾಡುವ ಇಂದಿನ ಒಂದು ವರ್ಗವೇ ಇಡೀ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದೆಯಲ್ಲ ಅದರ ಅಣಕು ಈ ನಾಟಕದಲ್ಲಿ ನಿರೂಪಿಸಲ್ಪಡುತ್ತದೆ. ಹಿಂದೆಲ್ಲಾ ಪತ್ರದ ಮೂಲಕವೇ ಮಾಹಿತಿ ರವಾನೆ ಆಗಿ ವಿಚಾರ ದೊರಕುತ್ತಿದ್ದವು. ಆದರೆ ಇಂದಿನ ಮಾಹಿತಿ ತಂತ್ರಜ್ಞಾನದಿಂದ ಉದ್ಭವಿಸಿರುವ ವಾಟ್ಸಾಪ್ ಸಹಿತ ಇತರ ಮಾಹಿತಿ ರವಾನಿಸುವ ಮೂಲಗಳಿಂದ ಮಾಹಿತಿ ಸೋರಿಕೆ ಆಗುವ ಬಗ್ಗೆಯೂ ಇರುವ ಕಾಳಜಿಯ ಕಳಕಳಿಯನ್ನು ನಿರ್ದೇಶಕರು ಸೇರಿಸಿಕೊಂಡಿದ್ದಾರೆ. ಸುಮಾರು 105 ನಿಮಿಷಗಳ ಕಾಲದ ನಾಟಕದಲ್ಲಿ ತಾ. 14 ರಂದು ಸುಳ್ಯದ ರಂಗಮನೆಯಲ್ಲಿ ನಡೆಯಲಿದೆ. ಆ ಬಳಿಕ ಪುತ್ತೂರು, ಮಂಗಳೂರಿನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ನಿರ್ದೇಶಕ ಜೀವನ್‍ರಾಮ್ ತಿಳಿಸಿದ್ದಾರೆ. ಸುಳ್ಯ, ಪುತ್ತೂರು, ಕೊಡಗು ಜಿಲ್ಲೆಯಲ್ಲಿ ಅರೆಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅರೆಭಾಷಿಕ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿ ಆಗಿದ್ದಾಗ ಅರೆಭಾಷೆ ಅಕಾಡೆಮಿ ಸ್ಥಾಪನೆಗೊಂಡು ಅರೆಭಾಷೆಗೆ ಅಧಿಕೃತ ಮಾನ್ಯತೆ ಬಂದಿತ್ತು.

-ಲೋಕೇಶ್ ಪೆರ್ಲಂಪಾಡಿ.