ಕುಶಾಲನಗರ, ಮಾ. 10: ಕುಶಾಲನಗರದ ಪೊಲೀಸ್ ವೃತ್ತ ನಿರೀಕ್ಷಕ ಎಂ.ಮಹೇಶ್ ಸೇರಿದಂತೆ ಮೂವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿ ದೊರಕಿದೆ. 2017ನೇ ಸಾಲಿನಲ್ಲಿ ಸಾಧನೆಗೈದ 121 ಪೊಲೀಸರಿಗೆ ಚಿನ್ನದ ಪದಕ ಘೋಷಣೆಯಾಗಿದ್ದು ಈ ಸಾಲಿನಲ್ಲಿ ಕೊಡಗಿನ ಜಿಲ್ಲಾ ನಿಯಂತ್ರಣ ಕೇಂದ್ರದ ಎಎಸ್‍ಐ ಬಿ.ಕೆ. ಸುರೇಶ್, ಕುಶಾಲನಗರ ಠಾಣೆಯ ಮುಖ್ಯ ಪೇದೆ ಟಿ.ಎಸ್.ಶಾಜಿ ಅವರುಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.(ಮೊದಲ ಪುಟದಿಂದ) 2018ರ ಸಾಲಿನಲ್ಲಿ 122 ಪೊಲೀಸರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಕಟಿಸಲಾಗಿದ್ದು ಮಡಿಕೇರಿಯಲ್ಲಿ ಇನ್ಸ್‍ಪೆಕ್ಟರ್ ಆಗಿ ಸೇವೆ ಸಲ್ಲಿಸಿ ಇದೀಗ ಪಿರಿಯಾಪಟ್ಟಣ ದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ.ಆರ್. ಪ್ರದೀಪ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಮೈಸೂರು ನಗರ ವಿಶೇಷ ದಳದ ಇನ್ಸ್‍ಪೆಕ್ಟರ್ ಆಗಿರುವ ಎಂ.ಷಣ್ಮುಗಂ ಅವರಿಗೂ ಪ್ರಶಸ್ತಿ ಲಭಿಸಿದೆ.ತಾ. 19 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.