ಮಡಿಕೇರಿ, ಮಾ. 10: ಸಂಸ್ಥೆಯ ಅಧ್ಯಕ್ಷರಾದ ಬಾಚೆಟ್ಟಿರ ಮಾದಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಇಡೀ ಶೈಕ್ಷಣಿಕ ವರ್ಷದಲ್ಲಿ ನಡೆದ ಶೈಕ್ಷಣಿಕ ಕ್ರೀಡಾ ಮತ್ತು ಸಾಂಸ್ಕøತಿಕ ಚಟುವಟಿಕೆ ಮತ್ತು ಪ್ರಗತಿ ಬಗ್ಗೆ ಉಪನ್ಯಾಸಕಿ ಕಲ್ಪನಾ ಅವರು ಪವರ್ ಪಾಯಿಂಟ್ ಪ್ರರ್ದಶನದ ಮೂಲಕ ಮಂಡಿಸಿದರು. ಇದೇ ಸಂದರ್ಭದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಹಾಗೂ ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಿದ್ದ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿ ಅಭಿಷೇಕ್‍ರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ವಿದ್ಯಾ ಸಂಸ್ಥೆಯ ಪ್ರಾಥಮಿಕ ಶಾಲಾ ವಿಭಾಗದ ದೈಹಿಕ ಶಿಕ್ಷಕರಾದ ರಾಕೇಶ್ ಅವರನ್ನು ಅವರ ಸಾಧನೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿದ್ದ ಬಾಚೆಟ್ಟಿರ ಮಾದಪ್ಪನವರು ಮಾತನಾಡಿ ಪದವಿ ಕಾಲೇಜಿನ ಶೈಕ್ಷಣಿಕ ಹಾಗು ಕ್ರೀಡಾ ರಂಗದ ಸಾಧನೆಗಳ ಬಗ್ಗೆ ಹಾಗೂ ಉಪನ್ಯಾಸಕ ವೃಂದದ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು. ಪ್ರಾಂಶುಪಾಲರಾದ ಪ್ರೊ. ಪಟ್ಟಡ ಪೂವಣ್ಣನವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಪೋಷಕರು ಕಾಲಕಾಲಕ್ಕೆ ತಮ್ಮ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಪರಿಶೀಲಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಬಾಹ್ಯ ಪ್ರಪಂಚದ ಅರಿವು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು. ಉಪನ್ಯಾಸಕರಾದ ಕಿಗ್ಗಾಲು ಹರೀಶ್ ಅವರು ಸ್ವಾಗತಿಸಿದರು. ದರ್ಶನ್ ಹಾಗೂ ಹರ್ಷ ಮಂದಣ್ಣ ನಿರೂಪಿಸಿದರು. ಉಪನ್ಯಾಸಕರಾದ ಅನೂಪ್ ವಂದಿಸಿದರು.