ಅಧ್ಯಕ್ಷರಾಗಿ ಕಟ್ಟ್ಟೇರ ಸುಶೀಲ

ಮಡಿಕೇರಿ, ಮಾ. 10: ಶ್ರೀಮಂಗಲ ಕೊಡವ ಸಮಾಜದ ಅಧೀನದಲ್ಲಿ ನೂತನ ಮಹಿಳಾ ಪರಿಷತ್ ರಚನೆಗೊಂಡಿದ್ದು, ಲೇಖಕಿ ಹಾಗೂ ನಿವೃತ್ತ ಶಿಕ್ಷಕಿ ಕಟ್ಟೇರ ಸುಶೀಲ ಅವರು ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಬೊಜ್ಜಂಗಡ ಶೈಲಾ ಸುಬ್ರಮಣಿ ಕಾರ್ಯದರ್ಶಿಯಾಗಿ ಡಾ. ಕಟ್ಟೇರ ಸಂಧ್ಯಾ ಪೂಣಚ್ಚ ಆಯ್ಕೆಗೊಂಡರು.

ಈ ಸಂದರ್ಭ ಮಾತನಾಡಿದ ಅಧ್ಯಕ್ಷೆ ಕಟ್ಟೇರ ಸುಶೀಲ ಅವರು ಮಹಿಳಾ ಪರಿಷತ್‍ನ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ನಿರ್ದೇಶಕರೂ ಕೈ ಜೋಡಿಸುವಂತಾಗಬೇಕು ಎಂದು ಹೇಳಿದರಲ್ಲದೆ. ನೂತನ WಟಕದÀ ಉದ್ಘಾಟನೆಯನ್ನು ನೆರವೇರಿಸಿದರು.