ಸ್ವಾಮಿ ಶ್ರೀ ಮುಕ್ತಿದಾನಂದರು

ದೇವಸ್ಥಾನಗಳು ಪೂಜಾ ವಿಧಿವಿಧಾನಗಳ ಕಾರ್ಯನಿರ್ವಹಣೆಯೊಂದಗೆ ಸನಾತನ ಧರ್ಮವನ್ನು ಬೋಧಿಸುವ ಧಾರ್ಮಿಕ ಶಿಕ್ಷಣ ಕೇಂದ್ರಗಳಾಗಿಯೂ ವಿಸ್ತಾರಗೊಳ್ಳಬೇಕು ಎಂದು ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಶ್ರೀ ಮುಕ್ತಿದಾನಂದರು ಅಭಿಪ್ರಾಯಪಟ್ಟರು.

ಅವರು ಪೊನ್ನಂಪೇಟೆ ರಾಮಕೃಷ್ಣಾಶ್ರಮದ ಸ್ವಾಮೀಜಿ ಶ್ರೀ ಬೋಧಸ್ವರೂಪಾನಂದರೊಂದಿಗೆ ಇತ್ತೀಚೆಗೆ ಮಾದಾಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಂದರ್ಭ “ಶಕ್ತಿ” ಯೊಂದಿಗೆ ಮಾತನಾಡುತ್ತಿದ್ದರು. ಸನಾತನ ಹಿಂದೂ ಧರ್ಮದಲ್ಲಿ ಬ್ರಾಹ್ಮಣರು ನಿತ್ಯಾನುಷ್ಠಾನ ಆಚರಣೆ, ಗಾಯತ್ರಿ ಜಪ ಇತ್ಯಾದಿ ಮಾಡುವದು ಕಡ್ಡಾಯವೆನಿಸಿದೆ. ಆದರೆ, ವಿಶಾಲ ಹಿಂದೂ ಧರ್ಮದಲ್ಲಿ ಇತರ ಬಹುತೇಕ ಜಾತಿಯ ಮಂದಿಗೆ ಧರ್ಮದ ತಿರುಳನ್ನು ಬೋಧಿಸುವದು, ಅನುಷ್ಠಾನ ಮಾಡುವದು ಅತ್ಯಗತ್ಯ. ಹೀಗಿದ್ದರೆ ಮಾತ್ರ ಧರ್ಮವು ಅಚ್ಚಳಿಯದೆ ಉಳಿಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಈ ಕೆಲಸವನ್ನು ಎಲ್ಲ ದೇವಾಲಯಗಳು ಹಮ್ಮಿಕೊಳ್ಳಬೇಕಿದೆ. ಜೊತೆಗೆ, ಧರ್ಮವು ಕೇವಲ ಸ್ವಾಮೀಜಿಗಳಿಗೆ ಸೀಮಿತವಲ್ಲ. ಪ್ರತಿಯೊಬ್ಬ ಗೃಹಸ್ಥರೂ ತಮ್ಮ ಮನೆಗಳಲ್ಲಿ ಧರ್ಮಾಚರಣೆ ಮಾಡಬೇಕು, ಗೃಹಸ್ಥರಿಂದಲೇ ಧರ್ಮ ಉಳಿಯಲು ಸಾಧ್ಯ. ಈ ಧರ್ಮದಿಂದಲೇ ಎಲ್ಲರ ಬಾಳು ಬೆಳಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮುಸ್ಲಿಮರು, ಕ್ರ್ರಿಶ್ಚಿಯನರು ಕಡ್ಡಾಯವಾಗಿ ಧರ್ಮಾಭ್ಯಾಸ, ಮಸೀದಿ, ಚರ್ಚ್‍ಗಳಿಗೆ ತೆರಳುವದನ್ನು ಮಾಡುತ್ತಾರೆ. ಹಿಂದೂ ಧರ್ಮೀಯರಲ್ಲಿ ಈ ಬಗ್ಗೆ ಅನೇಕ ಮಂದಿ ಅದರಲ್ಲೂ ಯುವ ಪೀಳಿಗೆಯಲ್ಲಿ ನಿರ್ಲಕ್ಷ್ಯವಿದೆ. ಧರ್ಮದ ಕುರಿತು ಯಾರೂ ತಿಳಿದುಕೊಳ್ಳಲು ಆಸಕ್ತಿ ವಹಿಸದಿರುವದು ಖೇದಕರ. ಭಗವದ್ಗೀತೆಯ ಒಂದು ಶ್ಲೋಕವಾದರೂ ಗೊತ್ತಿಲ್ಲದವರಿದ್ದಾರೆ. ಇದಕ್ಕೆ ಕಾರಣ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಧರ್ಮದ ಕುರಿತು ಯಾವದೇ ಅಳವಡಿಕೆ ಇಲ್ಲದಿರುವದು. ಈ ಹಿನ್ನೆಲೆಯಲ್ಲಿ, ದೇವಾಲಯಗಳಲ್ಲಿ ಮನೆ ಮನೆಗಳಲ್ಲಿ ವೃತ್ತಿಪರ ಶಿಕ್ಷಣಕ್ಕಿಂತ ಹೊರತಾದ ಧಾರ್ಮಿಕ ಶಿಕ್ಷಣ ಯುವಪೀಳಿಗೆಗೆ ಅವಶ್ಯಕತೆಯಿದೆ, ಇದು ಅವರ ಜೀವನ ವಿಕಸನಕ್ಕೂ ದಾರಿ ಮಾಡಿಕೊಡುತ್ತದೆ ಎಂದು ಸ್ವಾಮೀಜಿ ತಿಳಿಸಿದರು. ಮಠಾಧಿಪತಿಗಳು ಮಾತ್ರ ಸನಾತನ ಧರ್ಮವನ್ನು ಉಳಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ಗೃಹಸ್ಥನೂ ತನ್ನ ಮನೆಯಲ್ಲಿಯೇ ಮಾಡುವ ಅನುಷ್ಠಾನದಿಂದ ಮಾತ್ರ ಹಿಂದೂ ಧರ್ಮ ಉಳಿಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಸನಾತನ ಸಂಸ್ಕøತಿಯ ಜ್ಞಾನ ಮತ್ತು ಸಂಸ್ಕಾರವನ್ನು ಗ್ರಾಮಾಂತರ ಜನರಿಗೆ ಅವರವರ ಮಾತೃಭಾಷಾ ಮಾಧ್ಯಮಗಳ ಮೂಲಕ ಕ್ರಮಬದ್ಧವಾಗಿ ನೀಡುವ ಪ್ರ್ರಾಮಾಣಿಕ ಪ್ರಯತ್ನ ನಡೆಯಬೇಕು ಎಂದರು. ಹೊಸ ದೇವಾಲಯಗಳ ನಿರ್ಮಾಣ ಸಂದರ್ಭ ಸಾಂ¥್ರÀದಾಯಿಕ ಪೂಜೆ ಜೊತೆ ಎಲ್ಲ ಜಾತಿ ವರ್ಗದ ಜನರಿಗೆ ಧರ್ಮಶಿಕ್ಷಣ ನೀಡುವ ಸತ್ಕಾರ್ಯವನ್ನು ಪ್ರಾರಂಭಿಸಬೇಕು ಎಂದು ಅಭಿಪ್ರಾಯಪಟ್ಟರು. ಮಕ್ಕಳಿಗೆ ವಿದ್ಯಾ ಕೇಂದ್ರಗಳಲ್ಲಿ ಕೇವಲ ಉದ್ಯೋಗ ಪರ, ವೃತ್ತಿಪರ ಶಿಕ್ಷಣ ಮಾತ್ರ ನೀಡಲಾಗುತ್ತದೆ. ತಮ್ಮ ಮೂಲಧರ್ಮವನ್ನು ಹಿಂದೂಗಳು ಕಲಿಯುವ ಅವಕಾಶಗಳೆ ಕಡಿಮೆ. ಇದರಿಂದ ದೇವಾಲಯಗಳಲ್ಲಿ ಈ ಕಾರ್ಯ ಕಡ್ಡಾಯವಾಗಿ ಮೂಡಿಬರಲಿ ಎಂದು ಹಾರೈಸಿದರು.

ಗೃಹಸ್ಥರು ತಾವೂ ಧರ್ಮವನ್ನು ಮನೆಗಳಲ್ಲ್ರಿ ಅನುಷ್ಠಾನ ಮಾಡುವದರೊಂದಿಗೆ ತಮ್ಮ ಮಕ್ಕಳನ್ನೂ ಕೂಡ ಮನೆಗಳಲ್ಲಿ ಕೆಲ ಕಾಲವಾದರೂ ಧರ್ಮದÀ ತಿರುಳನ್ನು ಅರಿಯುವಂತೆ ಮಾಡಿದರೆ ಅಂತಹ ಮಕ್ಕಳ ಭವಿಷ್ಯ ಉಜ್ವÀಲವಾಗುತ್ತದೆ. ಅವರು ವಿದ್ಯೆಯೊಂದಿಗೆ ಧರ್ಮ, ನೈತಿಕತೆಯ ಅರಿವು ಹೊಂದುವ ಮೂಲಕ ಉತ್ತಮ ಸಮಾಜ ಜೀವಿಗಳಾಗುವದರೊಂದಿಗೆ ಕೌಟುಂಬಿಕ ಸಾಮರಸ್ಯವನ್ನು ಕೂಡ ಸಾಧಿಸುವ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾÀ್ತರೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು. ಪೊನ್ನಂಪೇಟೆಯ ಬೋಧಸ್ವರೂಪಾನಂದರು ಈ ಸಂದರ್ಭ ಉಪಸ್ಥಿತರಿದ್ದರು.