*ಗೋಣಿಕೊಪ್ಪ, ಮಾ. 10: ಹುಣಸೂರು ತಲಕಾವೇರಿ ರಾಜ್ಯ ಹೆದ್ದಾರಿಯಲ್ಲಿ ಮಳೆಯಿಂದ ಹಾನಿಗೊಳಗಾದ ರಸ್ತೆ ದುರಸ್ತಿ ಮತ್ತು ಮೋರಿ ನಿರ್ಮಾಣ ಹಾಗೂ ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ತಿತಿಮತಿ ರಾಮಮಂದಿರದ ಮುಂಭಾಗದಲ್ಲಿ ಭೂಮಿ ಪೂಜೆ ನೆರವೇರಿಸಿದರು.
ರೂಪಾಯಿ ಮೂರು ಕೋಟಿ 32 ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ. ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಮೂಲಕ ಹಾದುಹೋಗುವ ತಲಕಾವೇರಿ ಹೆದ್ದಾರಿಯ 10 ಪಾಯಿಂಟ್ 70 ರಸ್ತೆಗಳಿಗೆ ಮರು ಡಾಂಬರೀಕರಣ ಮತ್ತು ಮೋರಿಗಳ ನಿರ್ಮಾಣ ಕಾರ್ಯ 1 ಕೋಟಿ 45 ಲಕ್ಷದಲ್ಲಿ ನಡೆಯಲಿದೆ.
ರೂ. 1 ಕೋಟಿ 87 ಲಕ್ಷಗಳ ಅನುದಾನದಲ್ಲಿ ನೋಕ್ಯ ಮರಪಲಾ ಪೈಸಾರಿ ರಸ್ತೆ, ಜನತಾ ಕಾಲೋನಿ ರಸ್ತೆ, ಕರಡಿಕೊಪ್ಪ ಸಾರ್ವಜನಿಕ ರಸ್ತೆ, ನೋಕ್ಯ ಗ್ರಾಮ ಸಾರ್ವಜನಿಕ ಭವನ ನಿರ್ಮಾಣ, ಕಾರೆಕಂಡಿ ಸಂಪರ್ಕರಸ್ತೆ, ದೇವಮಚ್ಚಿ ರಸ್ತೆ, ಬೊಗ್ಗನ ಹಡ್ಲುವಿಗೆ ತೆರಳುವ ರಸ್ತೆ, ಬೊಂಬುಕಾಡು ಕಾಲೋನಿ ರಸ್ತೆ, ಚೀಣಿಹಡ್ಲು ಕಾಲೋನಿ ರಸ್ತೆ, ದೊಡ್ಡರೇಷ್ಮೆ ಶಾಲೆ ಮುಂಭಾಗದಿಂದ ಚಿಕ್ಕರೇಷ್ಮೆ ಹಾಡಿಗೆ ಹಾದುಹೋಗುವ ರಸ್ತೆ, ಚಿಕ್ಕ ರೇಷ್ಮೆಯಿಂದ ದೊಡ್ಡ ರೇಷ್ಮೆಗೆ ಸಂಪರ್ಕರಸ್ತೆ, ದೊಡ್ಡ ರೇಷ್ಮೆ ಹಾಗೂ ಚಿಕ್ಕ ರೇಷ್ಮೆ ಹಾಡಿಯಲ್ಲಿ ಸೇತುವೆ ನಿರ್ಮಾಣ, ಪರಿಶಿಷ್ಟ ಕಾಲೋನಿಗೆ ತೆರಳುವ ರಸ್ತೆ, ಕಿರು ಸೇತುವೆ ನಿರ್ಮಾಣ, ಮರಪಾಲದಲ್ಲಿ ಕಿರುಸೇತುವೆ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿ. ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ ಎರಡನೇ ಹಂತದ ಅನುದಾನ ಬರುವ ನಿರೀಕ್ಷೆಯಲ್ಲಿದ್ದು ತಿತಿಮತಿ ಗ್ರಾಪಂ ವ್ಯಾಪ್ತಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಶಾಸಕರು ಮಾಹಿತಿ ನೀಡಿದರು.
ಜಿಲ್ಲಾ ಬಿಜೆಪಿ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಗ್ರಾಪಂ ಸದಸ್ಯ, ತಿತಿಮತಿ ಸ್ಥಾನೀಯ ಸಮಿತಿ ಅಧ್ಯಕ್ಷ ಅನುಪ್ ಕುಮಾರ್, ಗ್ರಾಪಂ. ಸದಸ್ಯರುಗಳಾದ ಸಿದ್ದರಾಜು, ವಿಜಯ, ತಾಲೂಕು ವರ್ತಕರ ಪ್ರಕೋಷ್ಠ ಸಂಚಾಲಕ ಚೆಪ್ಪುಡಿರ ಮಾಚಯ್ಯ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಮೋಹನ್ ರಾಜ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ, ಉಪಾಧ್ಯಕ್ಷ ಮನು ನಂಜಪ್ಪ, ನಿರ್ದೇಶಕರಾದ ಗಣೇಶ್, ಪೊನ್ನಂಪೇಟೆ ಸ್ಥಾನೀಯ ಸಮಿತಿ ಅಧ್ಯಕ್ಷ ಮುದ್ದಿಯಡ ಮಂಜು, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಸಹಾಯಕ ನರಸಿಂಹ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ನವೀನ್, ಸುರೇಶ್, ಜಿ.ಪಂ. ಇಂಜಿನಿಯರ್ ಮಹದೇವ್, ಸೇರಿದಂತೆ ಸ್ಥಳೀಯರು ಹಾಜರಿದ್ದರು.