ಮಡಿಕೇರಿ, ಮಾ. 10: ಹೊದ್ದೂರು ಪಾಲೇಮಾಡು ನಿವಾಸಿ ಶಿವಣ್ಣ (47) ಅವರು ತಾ. 1 ರಂದು ಕೆಲಸದ ನಿಮಿತ್ತ ಮಂಗಳೂರಿಗೆ ತೆರಳುವುದಾಗಿ ತಿಳಿಸಿದ್ದು, ಇನ್ನೂ ಹಿಂತಿರುಗಿಲ್ಲ ಎಂದು ಅವರ ಪತ್ನಿ ಶೇಷಮ್ಮ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪುಕಾರು ನೀಡಿದ ಮೇರೆಗೆ ಪ್ರಕರಣ ದಾಖಲಾಗಿದೆ. ವ್ಯಕ್ತಿ ಪತ್ತೆಯಾದಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ ದೂ. 08272-228777ಗೆ ತಿಳಿಸುವಂತೆ ಕೋರಲಾಗಿದೆ.