ಮಡಿಕೇರಿ, ಮಾ. 10: ಭುವನೇಶ್ವರದ ಟಾಟ ಅಕಾಡೆಮಿ ವತಿಯಿಂದ 2005,06,07 ರಲ್ಲಿ ಜನಿಸಿದ ಹಾಕಿ ಆಟಗಾರರ ಆಯ್ಕೆ ಶಿಬಿರ ಹಮ್ಮಿಕೊಳ್ಳಲಾಗಿದ್ದು, ತಾ.13 ಹಾಗೂ 14 ರಂದು ಬೆಳಿಗ್ಗೆ 10 ಗಂಟೆಗೆ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಆಯ್ಕೆಯಾಗುವ ಆಟಗಾರರಿಗೆ ಕ್ರೀಡಾ ಸಾಮಗ್ರಿಗಳು ಊಟದೊಂದಿಗೆ ಪ್ರತಿ ತಿಂಗಳು ರೂ.1500 ಮಾಶಾಸನ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.