ಗೋಣಿಕೊಪ್ಪ ವರದಿ, ಮಾ. 7: ಆನೆಚೌಕೂರು ವನ್ಯಜೀವಿ ವಲಯ ವತಿಯಿಂದ ವಿಶ್ವ ವನ್ಯಜೀವಿ ದಿನಾಚರಣೆ ಅಂಗವಾಗಿ ಹೆದ್ದಾರಿಯಲ್ಲಿ ಕಸ ಹೆಕ್ಕುವ ಮೂಲಕ ಶ್ರಮದಾನ ನಡೆಸಲಾಯಿತು. ಅರಣ್ಯ ಸಿಬ್ಬಂದಿಯೊಂದಿಗೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳು ಪಾಲ್ಗೊಂಡು ಪರಸರ ಕಾಳಜಿ ಮೂಡಿಸಿದರು. ಸುಮಾರು 12 ಚೀಲ ಕಸವನ್ನು ಸಂಗ್ರಹಿಸಿದರು. ನಾಗರಹೊಳೆ ಉದ್ಯಾನವನ ನಿರ್ದೇಶಕ ಮಹೇಶ್‍ಕುಮಾರ್, ಎಸಿಎಫ್ ಪ್ರಸನ್ನಕುಮಾರ್, ಆರ್‍ಎಫ್‍ಒ ಶಿವಾನಂದ್, ಡಿಆರ್‍ಎಫ್‍ಒ ಯೋಗೇಶ್ವರಿ ಸಲಹೆಯಂತೆ ಶ್ರಮದಾನ ನಡೆಯಿತು.