ಮಡಿಕೇರಿ, ಮಾ. 7: ಕಗ್ಗೋಡ್ಲು ಗ್ರಾಮದ ಶ್ರೀ ಭಗವತಿ ದೇವಸ್ಥಾನದಲ್ಲಿ ಶ್ರೀ ಭಗವತಿ ದೇವರ ಬ್ರಹ್ಮಕಲಶೋತ್ಸವ, ಸ್ಥಿರ ಧ್ವಜಸ್ತಂಭ ಪ್ರತಿಷ್ಠೆ, ಅಶ್ವತ್ಥ ನಾರಾಯಣ ವಿವಾಹ ಕಾರ್ಯಕ್ರಮ ತಾ. 8 ರಿಂದ ತಾ. 13 ರವರೆಗೆ ನೆರವೇರಲಿದೆ.
ತಾ. 8 ರಂದು ಸಾಯಂಕಾಲ 6 ಗಂಟೆಗೆ ತಂತ್ರಿಗಳ ಆಗಮನ, ಸಾಮೂಹಿಕ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹ ವಾಚನ, ಅಂಕುರಾರೋಹಣ, ಪ್ರಸಾದ ಶುದ್ಧಿ, ವಾಸ್ತುರಕ್ಷೋಘ್ನ ಹೋಮ, ವಾಸ್ತುಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂರ್ಪಣೆ ನಡೆಯಲಿದೆ.
ತಾ. 9 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, ತ್ರಿಕಾಲ ಪೂಜೆ, ಅಂಕುರ ಪೂಜೆ, ಸ್ಥಳ ಶುದ್ಧಿ, ಬಿಂಬಶುದ್ಧಿ, ಪ್ರಾಯಶ್ಚಿತ ಹೋಮಗಳು, ಹೋಮ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನೆರವೇರಲಿದ್ದು, ಸಂಜೆ 7 ಗಂಟೆಗೆ ತ್ರಿಕಾಲ ಪೂಜೆ, ಅಂಕುರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನೆರವೇರಲಿದೆ.
ತಾ. 10 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, ತ್ರಿಕಾಲ ಪೂಜೆ, ಶಾಂತಿ ಹೋಮಗಳು, ಹೋಮ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 6 ಗಂಟೆಗೆ ತ್ರಿಕಾಲ ಪೂಜೆ, ಅಂಕುರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನೆರವೇರಲಿದೆ.
ತಾ. 11 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, ಅಂಕುರ ಪೂಜೆ, ಪ್ರಸಾದ ಪರಿಗ್ರಹ, ಬಿಂಬ ಪರಿಗ್ರಹ, ಅನುಜ್ಞಾಕಲಶ ಪೂಜೆ, ತತ್ವಕಲಶ ಪೂಜೆ, ತತ್ವ ಹೋಮ, ತತ್ವ ಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 6 ಗಂಟೆಗೆ ಅನುಜ್ಞಾ ಬಲಿ, ಸಾಮೂಹಿಕ ಪ್ರಾರ್ಥನೆ, ಬಿಂಬ ಶುದ್ಧಿ, ಕಲಶ ಪೂಜೆ, ತ್ರಿಕಾಲ ಪೂಜೆ, ಅಂಕುರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನೆರವೇರಲಿದೆ.
ತಾ. 12 ರಂದು ಬೆಳಿಗ್ಗೆ 10 ಗಂಟೆಗೆ ಗಣಪತಿ ಹೋಮ, ತ್ರಿಕಾಲ ಪೂಜೆ, ಅಂಕುರ ಪೂಜೆ, ಮಂಟಪ ಸಂಸ್ಕಾರ, ಕುಂಭೇಶ ಕರ್ಕರಿ ಪೂಜೆ, ಶಯ್ಯಾ ಪೂಜೆ, ತತ್ವ ಕಲಶ ಪೂಜೆ, ಸಂಹಾರ ತತ್ವ ಹೋಮ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಜೀವೋದ್ಪಾಸನ, ಪರಿಕಲಶ ಪೂಜೆ, ಜೀವಕಲಶ ಶಯ್ಯಾಗಮನ ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನೆರವೇರಲಿದ್ದು, ಸಂಜೆ 6 ಗಂಟೆಗೆ ಜಲೋದ್ಧಾರ ಬಿಂಬ ಶುದ್ಧಿ, ತ್ರಿಕಾಲ ಪೂಜೆ ಅಧಿವಾಸ ಹೋಮ, ಧ್ಯಾನಧಿವಾಸ, ಪೀಠಾಧಿವಾಸ ಪ್ರಸಾದ ಅಧಿವಾಸಂ, ಅಧಿವಾಸ ಪೂಜೆ, ಮಂಡಲ ಪೂಜೆ, ಮಹಾಪೂಹೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಲಿದೆ.
ತಾ. 13 ರಂದು ಬೆಳಿಗ್ಗೆ 7.42 ರ ಮೀನ ಲಗ್ನ ಶುಭ ಮುಹೂರ್ತ ದಲ್ಲಿ ಶ್ರೀ ಭಗವತಿ ಪುನರ್ ಪ್ರತಿಷ್ಠೆ, 10.15 ಕ್ಕೆ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ಧ್ವಜಸ್ತಂಭ ಪ್ರತಿಷ್ಠೆ ತದನಂತರ ಅಶ್ವಥ ನಾರಾಯಣ ವಿವಾಹ, ಅಷ್ಟಬಂಧ, ಬ್ರಹ್ಮಕಲಶಾ ಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನೆರವೇರಲಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.