ಚೆಟ್ಟಳ್ಳಿ, ಮಾ. 8: ಪೌರತ್ವ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಬಲಿಯಾದ ಅಮಾಯಕ ಜೀವಗಳಿಗೆ ಶಾಂತಿ ಕೋರಿ ಕ್ಯಾಂಡಲ್ ಹಿಡಿದು ಮೌನ ಪ್ರತಿಭಟನೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ನೆಲ್ಲಿಹುದಿಕೇರಿ ಸಮೀಪ ನಲ್ವತ್ಕೆರೆ ಗ್ರಾಮದ ಶಾದಿಮಹಲ್ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಪ್ರಗತಿಪರ ಜನಾಂದೋಲನ ವೇದಿಕೆ ವತಿಯಿಂದ ನಡೆದ ವಿಚಾರ ಸಂಕಿರಣ ಸಭೆಯಲ್ಲಿ ದೆಹಲಿ ಗಲಭೆಯಲ್ಲಿ ಮೃತಪಟ್ಟ ಅಮಾಯಕ ಜೀವಗಳಿಗೆ ಸಂತಾಪ ಸೂಚಿಸುವ ಮೂಲಕ ಕ್ಯಾಂಡಲ್ ಹಿಡಿದು ಮೌನ ಪ್ರತಿಭಟನೆ ಮಾಡಿ ಶಾಂತಿ ಕೋರಿದರು.