ಸುಂಟಿಕೊಪ್ಪ, ಮಾ. 8: ಚೆಟ್ಟಳ್ಳಿ ಅಬ್ಯಾಲದ ಕಾಫಿ ತೋಟದಲ್ಲಿ ಮರವನ್ನು ಕಡಿದು ಹಗ್ಗದ ಸಹಾಯದಿಂದ ಇಳಿಸುತ್ತಿದ್ದ ಕಾರ್ಮಿಕ ನಾಕೂರು ಶಿರಂಗಾಲ ಗ್ರಾಮದ ಉಮೇಶ ಅವರ ಮೈಮೇಲೆ ಮರ ಬಿದ್ದು ಸಾವನ್ನಪ್ಪಿದ್ದರು.

ಮೃತ ಬಡ ಕುಟುಂಬಕ್ಕೆ ನಾಕೂರು ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‍ನ ಅಧ್ಯಕ್ಷ ಶಂಕರನಾರಾಯಣ ಹಾಗೂ ಪದಾಧಿಕಾರಿಗಳು ವಂತಿಗೆ ಸಂಗ್ರಹಿಸಿ 40,200 ರೂ.ಗಳನ್ನು ನೆರವು ನೀಡಿದ್ದಾರೆ.

ನಾಕೂರು ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‍ನ ಖಜಾಂಜಿ ಪಿ.ಎಸ್. ಅನಿಲ್‍ಕುಮಾರ್, ಮಳ್ಳೂರು ಟಿಂಬರ್ ವ್ಯಾಪಾರಿ ಅಜೇಶ್ ಸತೀಶ್ ಇದ್ದರು.