ಸುಂಟಿಕೊಪ್ಪ, ಮಾ. 7: ಧಾರವಾಡದಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಫುಟ್‍ಬಾಲ್ ಪಂದ್ಯಾಟದಲ್ಲಿ ಕೊಡಗು ತಂಡವು ಶಿವಮೊಗ್ಗ ತಂಡವನ್ನು 1-0 ಗೋಲುಗಳಿಂದ ಮಣಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.
ಅಂತಿಮ ಪಂದ್ಯದಲ್ಲಿ ಎರಡು ತಂಡಗಳ ಸಮಬಲದ ಹೋರಾಟದ ನಡುವೆ, ಉತ್ತಮ ಅವಕಾಶವನ್ನು ಬಳಸಿಕೊಂಡ ಕೊಡಗು ತಂಡದ ನಾಯಕ ವೇಣು ಗೋಪಾಲ್ ಆಕರ್ಷಕ ಗೋಲನ್ನು ಬಾರಿಸುವುದರ ಮೂಲಕ ಜಯಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದೆ. ಇದಕ್ಕೂ ಮೊದಲು ನಡೆದ ಪಂದ್ಯಾಟದಲ್ಲಿ ಕೊಡಗು ತಂಡವು ಬೆಂಗಳೂರು ತಂಡವನ್ನು ಟ್ರೈ ಬ್ರೇಕರ್‍ನಲ್ಲಿ 5-3 ಗೋಲುಗಳಿಂದ ಜಯಗಳಿಸಿ ಫೈನಲ್‍ಗೆÀ ಪ್ರವೇಶ ಪಡೆದಿತ್ತು.