ಸೋಮವಾರಪೇಟೆ, ಮಾ. 7: ತಾಲೂಕು ಮೊಗೇರ ಸಮಾಜದ ಯುವ ವೇದಿಕೆಯ ವಾರ್ಷಿಕ ಸಭೆÀ ಗೌರವಾಧ್ಯಕ್ಷ ಪಿ.ಕೆ. ಚಂದ್ರು ಅಧ್ಯಕ್ಷತೆಯಲ್ಲಿ ಸ್ಥಳೀಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಿತು.
ಇದೇ ಸಂದರ್ಭ ನೂತನ ಸಾಲಿನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಪಿ.ಬಿ. ಸುರೇಶ್, ಗೌರವಾಧ್ಯಕ್ಷರಾಗಿ ಪಿ.ಕೆ. ಚಂದ್ರು, ಉಪಾಧ್ಯಕ್ಷರಾಗಿ ಕರ್ಕಳ್ಳಿ ವೆಂಕಪ್ಪ, ಕಾರ್ಯದರ್ಶಿಯಾಗಿ ತಣ್ಣೀರುಹಳ್ಳ ಗ್ರಾಮದ ಪ್ರವೀಣ್, ಉಪ ಕಾರ್ಯದರ್ಶಿಯಾಗಿ ಬಜೆಗುಂಡಿ ಗ್ರಾಮದ ಯೋಗೇಶ್, ಖಜಾಂಚಿಯಾಗಿ ಪಿ.ಬಿ. ದೇವರಾಜು ಆಯ್ಕೆಯಾದರು.
ಕ್ರೀಡಾ ಸಮಿತಿ ಅಧ್ಯಕ್ಷರಾಗಿ ರಮೇಶ್ (ತನಿಯಪ್ಪ), ಉಪಾಧ್ಯಕ್ಷರಾಗಿ ಕಿಬ್ಬೆಟ್ಟ ರಮೇಶ್, ಕಾರ್ಯದರ್ಶಿ ಕರ್ಕಳ್ಳಿ ವಿನೋದ್, ಸಂಚಾಲಕರಾಗಿ ಕಾಗಡಿಕಟ್ಟೆ ಕೆ.ಟಿ. ಕುಮಾರ ಆಯ್ಕೆಯಾದರು.
ಸಲಹೆಗಾರರಾಗಿ ಕೆ.ಜಿ. ಸತೀಶ್, ಸದಾನಂದ, ಹರೀಶ್, ಮಸಗೋಡು ಜಗನ್ನಾಥ್, ತಣ್ಣೀರುಹಳ್ಳ ಪ್ರದೀಪ್, ರಾಜೇಶ್, ಹರಿಪ್ರಸಾದ್, ಮಧು, ಅಕ್ಷಯ್, ಅನಿಲ್, ಪ್ರವೀಣ್, ಸತೀಶ್, ಹೇಮಂತ್ ಹಾಗೂ ಗಗನ್ ನೇಮಕಗೊಂಡರು.