ಶ್ರೀ ರಾಮನು ಲಕ್ಷ್ಮಣನೊಡನೆ ಮಾತು ಮುಂದುವರಿಸುತ್ತಾ ಹೇಳುತ್ತಾನೆ. "ಈ ದಿವ್ಯಾಶ್ರಮದ ಸುತ್ತಲೂ ಇರುವ ವನಪ್ರದೇಶವು ಹೋಮಧೂಮ ದಿಂದ ವ್ಯಾಪ್ತವಾಗಿದೆ. ಸುತ್ತಲೂ ಹರಡಿರುವ ನಾರುಮಡಿಗಳ ಸಾಲು ಈ ಆಶ್ರಮದ ಸೊಬಗನ್ನು ಹೆಚ್ಚಿಸುತ್ತಿದೆ. ಈ ಆಶ್ರಮ ಭೂಮಿಯು ಪ್ರಶಾಂತವಾದ ಮೃಗಗಳ ಸಮೂಹಗಳಿಂದ ತುಂಬಿ ಹೋಗಿದೆ. ನಾನಾ ವಿಧವಾದ ಪಕ್ಷಿಗಳಿಂದ ನಿನಾದಿತವಾಗಿದೆ. ಮೂರು ಲೋಕಗಳಿಗೂ ಒಳ್ಳೆಯದನ್ನು ಮಾಡುವ ಅಪೇಕ್ಷೆಯಿಂದ ಮೃತ್ಯುರೂಪರಾಗಿದ್ದ ಇಲ್ವಲ-ವಾತಾಪಿಗಳನ್ನು ಶೀಘ್ರವಾಗಿ ನಿಗ್ರಹಿಸಿ ಪುಣ್ಯಕರ್ಮರಾದ ಅಗಸ್ತ್ಯರು ಮೃತ್ಯುರೂಪವಾಗಿದ್ದ ದಕ್ಷಿಣ ದಿಕ್ಕನ್ನು ತಪಸ್ವಿಗಳ ಆಶ್ರಯಸ್ಥಾನವನ್ನಾಗಿ ಪರಿವರ್ತಿಸಿದರು. ಮಹಾನುಭಾವರಾದ ಅಗಸ್ತ್ಯರ ಪ್ರಭಾವದಿಂದಾಗಿ ರಾಕ್ಷಸರು ಈ ದಿಕ್ಕನ್ನು ಭಯದಿಂದ ನೋಡುವರೇ ಹೊರತು ಹಿಂದಿನಂತೆ ಆಕ್ರಮಿಸಲು ಬರುವದಿಲ್ಲ. ಅಂತಹ ಮಹಾನುಭಾವರ ಆಶ್ರಮಸ್ಥಾನವು ಇದೇ ಆಗಿದೆ. ಪುಣ್ಯಕರ್ಮರಾದ ಮಹರ್ಷಿಗಳು ಈ ದಕ್ಷಿಣ ದಿಕ್ಕನ್ನು ಆಶ್ರಯಿಸಿ ಇಲ್ಲಿ ಆಶ್ರಮವನ್ನು ಮಾಡಿಕೊಂಡು ನೆಲೆಸಿದ ದಿನ ಮೊದಲ್ಗೊಂಡು ರಾಕ್ಷಸರು ಇಲ್ಲಿ ವೈರತ್ವವನ್ನು ತೊರೆದು ಶಾಂತರಾಗಿದ್ದಾರೆ, ಕ್ರೂರಕರ್ಮಿಗಳಾದ ರಾಕ್ಷಸರಿಗೆ ದುರ್ಧರ್ಷವಾದ ಈ ದಕ್ಷಿಣ ದಿಕ್ಕು ಹೆಸರಿನಿಂದ ಕೂಡ ‘ಭಗವತಃ ಪ್ರದಕ್ಷಿಣಾ ದಕ್ಷಿಣಾ-ಪೂಜ್ಯರಾದ ಅಗಸ್ತ್ಯ ಮಹರ್ಷಿಗಳ ಪ್ರಶಸ್ತವಾದ ದಕ್ಷಿಣದಿಕ್ಕು’ ಎಂದು ಮೂರು ಲೋಕ ಗಳಲ್ಲಿಯೂ ವಿಖ್ಯಾತವಾಗಿದೆ. ಪರ್ವತಗಳಲ್ಲಿ ಶ್ರೇಷ್ಠವಾದ ವಿಂಧ್ಯ ಪರ್ವತವು ಸೂರ್ಯನ ಮಾರ್ಗವನ್ನು ತಡೆಗಟ್ಟಲು ಸತತವಾಗಿ ಪ್ರಯತ್ನಿಸುತ್ತಲೇ ಇದ್ದಿತು. ಅದಕ್ಕಾಗಿ ಅದು ದಿನ-ದಿನಕ್ಕೂ ವೃದ್ಧಿಯನ್ನು ಹೊಂದುತ್ತಿದ್ದಿತು. ಆದರೆ ಅದು ಅಗಸ್ತ್ಯ ಮಹರ್ಷಿಗಳ ಸಂದೇಶವನ್ನು ಈಗಲೂ ಪರಿಪಾಲಿಸುತ್ತಿರುವದರಿಂದ ಹಾಗೆ ವರ್ಧಿಸುತ್ತಿಲ್ಲ. ಮೃಗಗಳಿಂದ ಸಂಸೇವಿತವಾದ, ಲೋಕವಿಖ್ಯಾತ ಕರ್ಮರಾದ, ದೀರ್ಘಾಯುಷ್ಮಂತರಾದ, ಅಗಸ್ತ್ಯ ಮಹರ್ಷಿಗಳ ಕಾಂತಿಯುಕ್ತವಾದ ದಿವ್ಯಾಶ್ರಮವು ಇದೇ ಆಗಿದೆ. ತ್ರೈಲೋಕ್ಯ ಪೂಜ್ಯರಾದ, ಸತ್ಪುರುಷರಾದ, ಸತ್ಪುರುಷರ ಹಿತದಲ್ಲಿಯೇ ಸದಾ ನಿರತರಾದ ಅಗಸ್ತ್ಯ ಮಹರ್ಷಿಗಳು ತಮ್ಮ ಸನ್ನಿಧಿಗೆ ಬರಲಿರುವ ನಮ್ಮನ್ನು ಅನುಗ್ರಹಿಸಿ ಶ್ರೇಯಸ್ಸನ್ನುಂಟುಮಾಡುತ್ತಾರೆ. ಇಲ್ಲಿ ನಾನು ಮಹಾಮುನಿಗಳಾದ ಅಗಸ್ತ್ಯರನ್ನು ಸತ್ಕರಿಸುತ್ತೇನೆ. ನನ್ನ ಉಳಿದ ವನವಾಸದ ಕಾಲವನ್ನು ಇಲ್ಲಿಯೇ ಕಳೆಯುತ್ತೇನೆ. ಇಲ್ಲಿ ಗಂಧರ್ವರಿಂದ ಕೂಡಿರುವ ದೇವತೆಗಳೂ, ಸಿದ್ಧರೂ, ಮಹರ್ಷಿಗಳೂ ನಿಯತವಾದ ಆಹಾರವನ್ನು ಸೇವಿಸುತ್ತಾ ಸತತವಾಗಿ ಅಗಸ್ತ್ಯರನ್ನು ಉಪಾಸನೆ ಮಾಡುತ್ತಿರುತ್ತಾರೆ.
ನಾತ್ರ ಜೀವೇನ್ಮøಪಾವಾದೀ ಕ್ರೂರೋ ವಾ ಯದಿ ವಾ ಶಠಃ |
ನೃಶಂಸಃ ಕಾಮವೃತ್ತೋ ವಾ ಮುನಿರೇಷ ತಥಾವಿಧಃ ||
ಈ ಆಶ್ರಮದ ಪರಿಸರದಲ್ಲಿ ಸುಳ್ಳು ಹೇಳುವವನಾಗಲೀ, ನಿರ್ದಯನಾಗಲೀ, ಕ್ರೂರಿಯಾಗಲೀ, ಘಾತುಕನಾಗಲೀ, ಸ್ವೇಷ್ಛಾಚಾರಿ ಯಾಗಲೀ ಬದುಕುವದಿಲ್ಲ. ಅಗಸ್ತ್ಯ ಮುನಿಗಳು ನಿಶ್ಚಯವಾಗಿಯೂ ಅಂತಹ ಅಮೋಘವಾದ ಪ್ರಭಾವವುಳ್ಳವರು. ಧರ್ಮೋಪಾಸನೆಯನ್ನು ಮಾಡಲು ಇಚ್ಛೆಯಿರುವ ದೇವತೆಗಳೂ, ಯಕ್ಷರೂ, ನಾಗರೂ, ಗರುಡನೇ ಮುಂತಾದ ಪಕ್ಷಿಶ್ರೇಷ್ಠರೂ ಈ ದಿವ್ಯಾಶ್ರಮದಲ್ಲಿ ನಿಯತವಾದ ಆಹಾರವನ್ನು ಸೇವಿಸುತ್ತಾ ಶ್ರೀ ರಾಮನು ಲಕ್ಷ್ಮಣನೊಡನೆ ಮಾತು ಮುಂದುವರಿಸುತ್ತಾ ಹೇಳುತ್ತಾನೆ. "ಈ ದಿವ್ಯಾಶ್ರಮದ ಸುತ್ತಲೂ ಇರುವ ವನಪ್ರದೇಶವು ಹೋಮಧೂಮ ದಿಂದ ವ್ಯಾಪ್ತವಾಗಿದೆ. ಸುತ್ತಲೂ ಹರಡಿರುವ ನಾರುಮಡಿಗಳ ಸಾಲು ಈ ಆಶ್ರಮದ ಸೊಬಗನ್ನು ಹೆಚ್ಚಿಸುತ್ತಿದೆ. ಈ ಆಶ್ರಮ ಭೂಮಿಯು ಪ್ರಶಾಂತವಾದ ಮೃಗಗಳ ಸಮೂಹಗಳಿಂದ ತುಂಬಿ ಹೋಗಿದೆ. ನಾನಾ ವಿಧವಾದ ಪಕ್ಷಿಗಳಿಂದ ನಿನಾದಿತವಾಗಿದೆ. ಮೂರು ಲೋಕಗಳಿಗೂ ಒಳ್ಳೆಯದನ್ನು ಮಾಡುವ ಅಪೇಕ್ಷೆಯಿಂದ ಮೃತ್ಯುರೂಪರಾಗಿದ್ದ ಇಲ್ವಲ-ವಾತಾಪಿಗಳನ್ನು ಶೀಘ್ರವಾಗಿ ನಿಗ್ರಹಿಸಿ ಪುಣ್ಯಕರ್ಮರಾದ ಅಗಸ್ತ್ಯರು ಮೃತ್ಯುರೂಪವಾಗಿದ್ದ ದಕ್ಷಿಣ ದಿಕ್ಕನ್ನು ತಪಸ್ವಿಗಳ ಆಶ್ರಯಸ್ಥಾನವನ್ನಾಗಿ ಪರಿವರ್ತಿಸಿದರು. ಮಹಾನುಭಾವರಾದ ಅಗಸ್ತ್ಯರ ಪ್ರಭಾವದಿಂದಾಗಿ ರಾಕ್ಷಸರು ಈ ದಿಕ್ಕನ್ನು ಭಯದಿಂದ ನೋಡುವರೇ ಹೊರತು ಹಿಂದಿನಂತೆ ಆಕ್ರಮಿಸಲು ಬರುವದಿಲ್ಲ. ಅಂತಹ ಮಹಾನುಭಾವರ ಆಶ್ರಮಸ್ಥಾನವು ಇದೇ ಆಗಿದೆ. ಪುಣ್ಯಕರ್ಮರಾದ ಮಹರ್ಷಿಗಳು ಈ ದಕ್ಷಿಣ ದಿಕ್ಕನ್ನು ಆಶ್ರಯಿಸಿ ಇಲ್ಲಿ ಆಶ್ರಮವನ್ನು ಮಾಡಿಕೊಂಡು ನೆಲೆಸಿದ ದಿನ ಮೊದಲ್ಗೊಂಡು ರಾಕ್ಷಸರು ಇಲ್ಲಿ ವೈರತ್ವವನ್ನು ತೊರೆದು ಶಾಂತರಾಗಿದ್ದಾರೆ, ಕ್ರೂರಕರ್ಮಿಗಳಾದ ರಾಕ್ಷಸರಿಗೆ ದುರ್ಧರ್ಷವಾದ ಈ ದಕ್ಷಿಣ ದಿಕ್ಕು ಹೆಸರಿನಿಂದ ಕೂಡ ‘ಭಗವತಃ ಪ್ರದಕ್ಷಿಣಾ ದಕ್ಷಿಣಾ-ಪೂಜ್ಯರಾದ ಅಗಸ್ತ್ಯ ಮಹರ್ಷಿಗಳ ಪ್ರಶಸ್ತವಾದ ದಕ್ಷಿಣದಿಕ್ಕು’ ಎಂದು ಮೂರು ಲೋಕ ಗಳಲ್ಲಿಯೂ ವಿಖ್ಯಾತವಾಗಿದೆ. ಪರ್ವತಗಳಲ್ಲಿ ಶ್ರೇಷ್ಠವಾದ ವಿಂಧ್ಯ ಪರ್ವತವು ಸೂರ್ಯನ ಮಾರ್ಗವನ್ನು ತಡೆಗಟ್ಟಲು ಸತತವಾಗಿ ಪ್ರಯತ್ನಿಸುತ್ತಲೇ ಇದ್ದಿತು. ಅದಕ್ಕಾಗಿ ಅದು ದಿನ-ದಿನಕ್ಕೂ ವೃದ್ಧಿಯನ್ನು ಹೊಂದುತ್ತಿದ್ದಿತು. ಆದರೆ ಅದು ಅಗಸ್ತ್ಯ ಮಹರ್ಷಿಗಳ ಸಂದೇಶವನ್ನು ಈಗಲೂ ಪರಿಪಾಲಿಸುತ್ತಿರುವದರಿಂದ ಹಾಗೆ ವರ್ಧಿಸುತ್ತಿಲ್ಲ. ಮೃಗಗಳಿಂದ ಸಂಸೇವಿತವಾದ, ಲೋಕವಿಖ್ಯಾತ ಕರ್ಮರಾದ, ದೀರ್ಘಾಯುಷ್ಮಂತರಾದ, ಅಗಸ್ತ್ಯ ಮಹರ್ಷಿಗಳ ಕಾಂತಿಯುಕ್ತವಾದ ದಿವ್ಯಾಶ್ರಮವು ಇದೇ ಆಗಿದೆ. ತ್ರೈಲೋಕ್ಯ ಪೂಜ್ಯರಾದ, ಸತ್ಪುರುಷರಾದ, ಸತ್ಪುರುಷರ ಹಿತದಲ್ಲಿಯೇ ಸದಾ ನಿರತರಾದ ಅಗಸ್ತ್ಯ ಮಹರ್ಷಿಗಳು ತಮ್ಮ ಸನ್ನಿಧಿಗೆ ಬರಲಿರುವ ನಮ್ಮನ್ನು ಅನುಗ್ರಹಿಸಿ ಶ್ರೇಯಸ್ಸನ್ನುಂಟುಮಾಡುತ್ತಾರೆ. ಇಲ್ಲಿ ನಾನು ಮಹಾಮುನಿಗಳಾದ ಅಗಸ್ತ್ಯರನ್ನು ಸತ್ಕರಿಸುತ್ತೇನೆ. ನನ್ನ ಉಳಿದ ವನವಾಸದ ಕಾಲವನ್ನು ಇಲ್ಲಿಯೇ ಕಳೆಯುತ್ತೇನೆ. ಇಲ್ಲಿ ಗಂಧರ್ವರಿಂದ ಕೂಡಿರುವ ದೇವತೆಗಳೂ, ಸಿದ್ಧರೂ, ಮಹರ್ಷಿಗಳೂ ನಿಯತವಾದ ಆಹಾರವನ್ನು ಸೇವಿಸುತ್ತಾ ಸತತವಾಗಿ ಅಗಸ್ತ್ಯರನ್ನು ಉಪಾಸನೆ ಮಾಡುತ್ತಿರುತ್ತಾರೆ.
ನಾತ್ರ ಜೀವೇನ್ಮøಪಾವಾದೀ ಕ್ರೂರೋ ವಾ ಯದಿ ವಾ ಶಠಃ |
ನೃಶಂಸಃ ಕಾಮವೃತ್ತೋ ವಾ ಮುನಿರೇಷ ತಥಾವಿಧಃ ||
ಈ ಆಶ್ರಮದ ಪರಿಸರದಲ್ಲಿ ಸುಳ್ಳು ಹೇಳುವವನಾಗಲೀ, ನಿರ್ದಯನಾಗಲೀ, ಕ್ರೂರಿಯಾಗಲೀ, ಘಾತುಕನಾಗಲೀ, ಸ್ವೇಷ್ಛಾಚಾರಿ ಯಾಗಲೀ ಬದುಕುವದಿಲ್ಲ. ಅಗಸ್ತ್ಯ ಮುನಿಗಳು ನಿಶ್ಚಯವಾಗಿಯೂ ಅಂತಹ ಅಮೋಘವಾದ ಪ್ರಭಾವವುಳ್ಳವರು. ಧರ್ಮೋಪಾಸನೆಯನ್ನು ಮಾಡಲು ಇಚ್ಛೆಯಿರುವ ದೇವತೆಗಳೂ, ಯಕ್ಷರೂ, ನಾಗರೂ, ಗರುಡನೇ ಮುಂತಾದ ಪಕ್ಷಿಶ್ರೇಷ್ಠರೂ ಈ ದಿವ್ಯಾಶ್ರಮದಲ್ಲಿ ನಿಯತವಾದ ಆಹಾರವನ್ನು ಸೇವಿಸುತ್ತಾ ಶ್ರೀರಾಮನು ತನ್ನ ಜೊತೆಯಲ್ಲಿ ಪತ್ನಿಯಾದ ಸೀತಾದೇವಿಯನ್ನೂ ಕರೆತಂದಿದ್ದಾನೆ, ತಮ್ಮನ್ನು ಸಂದರ್ಶಿಸುವದಕ್ಕೂ ಮತ್ತು ತಮ್ಮ ಸೇವೆಯನ್ನು ಮಾಡುವದಕ್ಕೂ ಅವರಿಲ್ಲಿಗೆ ಬಂದಿರುತ್ತಾರೆ. ಮುಂದೇನು ಮಾಡ ಬೇಕೆಂಬದನ್ನು ತಾವೇ ಆಜ್ಞಾಪಿಸಿರಿ.’’
ರಾಮ-ಲಕ್ಷ್ಮಣರೂ, ಮಹಾಭಾಗ್ಯಶಾಲಿನಿಯಾದ ಸೀತಾದೇವಿಯೂ ತಮ್ಮನ್ನು ಸಂದರ್ಶಿಸುವ ಸಲುವಾಗಿ ಆಶ್ರಮಕ್ಕೆ ಬಂದಿರುವರೆಂಬ ವಾರ್ತೆಯನ್ನು ಪ್ರಿಯಶಿಷ್ಯನಿಂದ ತಿಳಿದೊಡನೆಯೇ ಅಗಸ್ತ್ಯರು ಹೇಳಿದರು.
ದಿಷ್ಟ್ಯಾ ರಾಮಶ್ಟಿರಸ್ಯಾದ್ಯ ದ್ರಷ್ಟುಂ ಮಾಂ ಸಮುಪಾಗತಃ |
ಮನಸಾ ಕಾಂಕ್ಷಿತಂ ಹ್ಯ ಸ್ಯ ಮಯಾಪ್ಯಾಗಮನಂ ಪ್ರತಿ ||
‘‘ಋಷಿಕುಮಾರ ! ಬಹಳ ಕಾಲವು ಕಳೆದಮೇಲಾದರೂ ಈಗ ದೈವಯೋಗದಿಂದ ಶ್ರೀರಾಮನು ನನ್ನನ್ನು ನೋಡಲು ಬಂದಿರುವನು. ಅವನಿಲ್ಲಿಗೆ ಬರಬೇಕೆಂಬದು ನನ್ನ ಮನಸ್ಸಿನ ಆಕಾಂಕ್ಷೆಯೂ ಆಗಿದ್ದಿತು. ಈಗಲೇ ಹೋಗು, ಸೀತಾ ಲಕ್ಷ್ಮಣ ಸಮೇತನಾದ ಶ್ರೀರಾಮನನ್ನು ಯಥಾ ಯೋಗ್ಯವಾಗಿ ಸತ್ಕರಿಸಿ ನನ್ನ ಬಳಿಗೆ ಕರೆದುಕೊಂಡು ಬಾ, ರಾಮ ನೆಂಬುದು ತಿಳಿದ ಮೇಲೂ ನೀನೇಕೆ ಅವನನ್ನು ಒಳಕ್ಕೆ ಕರೆತರಲಿಲ್ಲ ?’’
ಧರ್ಮಜ್ಞರಾದ ಮಹಾತ್ಮರಾದ ಮುನಿಗಳು ಹೀಗೆ ಹೇಳಲು ಶಿಷ್ಯನು ಅಭಿವಾದನಮಾಡಿ ಅಗ್ನಿಗೃಹದಿಂದ ಹೊರಬಂದು ಅಂಗಳದಲ್ಲಿ ನಿಂತಿದ್ದ ಲಕ್ಷ್ಮಣನಿಗೆ ಹೇಳಿದನು.
‘‘ರಾಜಕುಮಾರ ! ರಾಮನೆಲ್ಲಿ ? ಮಹರ್ಷಿಗಳನ್ನು ಸಂದರ್ಶಿಸಲು ಈಗಲೇ ಆಗಮಿಸಲಿ, ಈಗಲೇ ಅವನು ಅಗ್ನಿಗೃಹವನ್ನು ಪ್ರವೇಶಿಸಲಿ’’ ಋಷಿಕುಮಾರನ ಮಾತನ್ನು ಕೇಳಿ ಲಕ್ಷ್ಮಣನು ಅವನೊಡನೆ ರಾಮ-ಸೀತೆಯರಿದ್ದ ಆಶ್ರಮದ ಅಂಗಳಕ್ಕೆ ಹೋಗಿ ಅವರಿಬ್ಬರನ್ನು ಅಗಸ್ತ್ಯ ಶಿಷ್ಯನಿಗೆ ಪರಿಚಯಿಸಿದನು. ಒಡನೆಯೇ ಋಷಿಕುಮಾರನು ವಿನಯದೊಡನೆ ಅಗಸ್ತ್ಯರು ಹೇಳಿದ ಮಾತುಗಳನ್ನು ಸತ್ಕಾರಕ್ಕೆ ಅರ್ಹನಾಗಿದ್ದ ಶ್ರೀರಾಮನೊಡನೆ ಹೇಳಿ, ಯಥಾಯೋಗ್ಯವಾಗಿ ಸತ್ಕರಿಸಿ ಆಶ್ರಮದೊಳಕ್ಕೆ ಕರೆದೊಯ್ದನು, ಶ್ರೀರಾಮನು ಜಿಂಕೆಗಳಿಂದ ಸಮಾವೃತವಾಗಿದ್ದ ಪ್ರಶಾಂತವಾದ ಆಶ್ರಮದ ಸೊಬಗನ್ನು ವೀಕ್ಷಿಸುತ್ತಾ ಸೀತಾ-ಲಕ್ಷ್ಮಣನೊಡನೆ ಆಶ್ರಮವನ್ನು ಪ್ರವೇಶಿಸಿದನು. ಆಶ್ರಮದ ಒಳಗಿನ ಅಂಗಳದಲ್ಲಿ ಬ್ರಹ್ಮನ ಸ್ಥಾನವನ್ನೂ, ಅಗ್ನಿಯ ಸ್ಥಾನವನ್ನೂ, ವಿಷ್ಣುವಿನ ಸ್ಥಾನವನ್ನೂ, ಮಹೇಂದ್ರನ ಸ್ಥಾನವನ್ನೂ, ಸೂರ್ಯನ ಸ್ಥಾನವನ್ನೂ, ಸೋಮನ ಸ್ಥಾನವನ್ನೂ, ಭಗದೇವತೆಯ ಸ್ಥಾನವನ್ನೂ, ಕುಬೇರನ ಸ್ಥಾನವನ್ನೂ, ಧಾತೃ ಮತ್ತು ವಿಧಾತೃಗಳ ಸ್ಥಾನಗಳನ್ನೂ, ವಾಯುವಿನ ಸ್ಥಾನವನ್ನೂ, ಪಾಶಶಹಸ್ತನಾದ ಮತ್ತು ಮಹಾತ್ಮನಾದ ವರುಣನ ಸ್ಥಾನವನ್ನೂ, ಗಾಯತ್ರಿಯ ಸ್ಥಾನವನ್ನೂ, ಅಷ್ಟವಸುಗಳ ಸ್ಥಾನವನ್ನೂ, ನಾಗರಾಜನ ಸ್ಥಾನವನ್ನೂ, ಗರುಡನ ಸ್ಥಾನವನ್ನೂ, ಕಾರ್ತಿಕೇಯನ ಸ್ಥಾನವನ್ನೂ ಮತ್ತು ಯಮಧರ್ಮನ ಸ್ಥಾನವನ್ನೂ ನೋಡಿದನು. ಆ ಹದಿನೇಳು ದೇವತೆಗಳೂ ಅಗಸ್ತ್ಯರ ಆಶ್ರಮದಲ್ಲಿ ಸುಪ್ರತಿಷ್ಠಿತರಾಗಿದ್ದರು. ಶ್ರೀರಾಮನನ್ನು ಸ್ವಾಗತಿಸುವ ಸಲುವಾಗಿ ಶಿಷ್ಯರಿಂದ ಪರಿವೃತರಾದ ಅಗಸ್ತ್ಯರೂ ಎದುರಾಗಿ ಬಂದರು. ಮಹಾಮಹಿಮರಾದ ಅಗಸ್ತ್ಯರು ಬರುತ್ತಿರುವದನ್ನು ಶ್ರೀರಾಮನು ನೋಡಿ ಲಕ್ಷ್ಮಣನಿಗೆ ಹೇಳಿದನು.
‘‘ಲಕ್ಷ್ಮಣ ಪೂಜ್ಯರಾದ ಅಗಸ್ತ್ಯ ಮಹರ್ಷಿಗಳು ಹೊರಗೆ ಬರುತ್ತಿದ್ದಾರೆ. ತೇಜೋವಿಶೇಷ-ರೂಪ-ಔನ್ನತ್ಯಾದಿಗಳಿಂದ ಇವರೇ ತಪೋನಿಧಿಗಳೆಂದು ಭಾವಿಸುತ್ತೇನೆ.’’
ಮಹಾಬಾಹುವಾದ ರಾಮನು ಸೂರ್ಯನ ತೇಜಸ್ಸಿಗೆ ಸಮಾನವಾದ ತೇಜಸ್ಸಿನಿಂದ ಕೂಡಿದ್ದ ಮಹಾಮಹಿಮರಾದ ಅಗಸ್ತ್ಯರ ವಿಷಯವಾಗಿ ಲಕ್ಷ್ಮಣನಿಗೆ ಹೀಗೆ ಹೇಳಿ ತನಗೆ ಅಭಿಮುಖವಾಗಿ ಬರುತ್ತಿದ್ದ ಅಗಸ್ತ್ಯರ ಎರಡು ಪಾದಗಳನ್ನೂ ಹಿಡಿದುಕೊಂಡನು. ಬಳಿಕ ಧರ್ಮಾತ್ಮನಾದ ಶ್ರೀರಾಮನು ಸೀತಾ-ಲಕ್ಷ್ಮಣರೊಡನೆ ಅಗಸ್ತ್ಯರಿಗೆ ಅಭಿವಾದಪೂರ್ವಕ ವಾಗಿ ನಮಸ್ಕರಿಸಿ ಕೈಮುಗಿದುಕೊಂಡು ನಿಂತುಕೊಂಡನು. ಅಗಸ್ತ್ಯರು ಶ್ರೀರಾಮನನ್ನು ಗಾಢವಾಗಿ ಆಲಿಂಗಿಸಿಕೊಂಡು ಆದರದಿಂದ ಬರಮಾಡಿಕೊಂಡರು. ಸುಖಾಸನವನ್ನಿತ್ತು ಅಘ್ರ್ಯ-ಪಾದ್ಯಾದಿಗಳಿಂದ ಯಥೋಚಿತವಾಗಿ ಸತ್ಕರಿಸಿದ ನಂತರ ಕುಶಲ ಪ್ರಶ್ನೆಗಳನ್ನು ಕೇಳಿ ಎಲ್ಲರಿಗೂ ಕುಳಿತುಕೊಳ್ಳಲು ಹೇಳಿದರು. ವೈಶ್ವದೇವ ವಿಧಿಯಂತೆ ಯಜ್ಞೇಶ್ವರನಲ್ಲಿ ಹೋಮ ಮಾಡಿ ಅತಿಥಿಗಳಿಗೆ ಅಘ್ರ್ಯವನ್ನಿತ್ತು ಸಂಪೂಜಿಸಿ ವಾನಪ್ರಸ್ಥೋಚಿತವಾದ ರೀತಿಯಲ್ಲಿ ರಾಮ-ಲಕ್ಷ್ಮಣ-ಸೀತೆಯರಿಗೆ ಭೋಜನವನ್ನು ಮಾಡಿಸಿದನು.
ಧರ್ಮಜ್ಞರಾದ, ಮುನಿಗಳಲ್ಲಿ ಶ್ರೇಷ್ಠರಾದ ಅಗಸ್ತ್ಯರು ಮೊದಲು ಆಸನದಲ್ಲಿ ಕುಳಿತು ಅನಂತರ ಶ್ರೀರಾಮನಿಗೂ ಕುಳಿತುಕೊಳ್ಳಲು ಹೇಳಿ ಸುಖಾಸನದಲ್ಲಿ ಕೈಮುಗಿದುಕೊಂಡು ಕುಳಿತಿದ್ದ ಧರ್ಮಕೋವಿದನಾದ ಶ್ರೀರಾಮನಿಗೆ ಹೇಳಿದರು.
ಅಗ್ನಿಂ ಹುತ್ವಾ ಪ್ರದಾಯಾಘ್ರ್ಯಂ ಮತಿಥಿಂ ಪ್ರತಿಪೂಜಯೇತ್ | ಅನ್ಯಥಾ ಖಲು ಕಾಕುತ್ಸ್ಥ ತಪಸ್ವೀ ಸಮುದಾಚರನ್ |
ದುಃಸಾಕ್ಷೀವ ಪರೇ ಲೋಕೇ ಸ್ವಾನಿ ಮಾಂಸಾನಿ ಭಕ್ಷ್ಯಯೇತ್ ||
‘‘ರಾಮ ವೈಶ್ವದೇವವಿಧಿಯಲ್ಲಿ ಬರುವಂತೆ ಅಗ್ನಿಯಲ್ಲಿ ಹೋಮ ಮಾಡಿ ಅತಿಥಿಯಾದವನಿಗೆ ಅಘ್ರ್ಯವನ್ನಿತ್ತು ಸತ್ಕರಿಸಬೇಕು. ಈ ವಿಧಾನದಲ್ಲಿ ಅತಿಥಿ ಪೂಜೆಯನ್ನು ಮಾಡದಿದ್ದರೆ ತಪಸ್ವಿಯೂ ಕೂಡ ಸುಳ್ಳು ಸಾಕ್ಷಿಯನ್ನು ಹೇಳಿದವನಂತೆ ಪರಲೋಕದಲ್ಲಿ ತನ್ನ ಮಾಂಸವನ್ನು ತಾನೇ ಭಕ್ಷಿಸಬೇಕಾಗುತ್ತದೆ.
ರಾಜಾ ಸರ್ವಸ್ಯ ಲೋಕಸ್ಯ ಧರ್ಮಚಾರೀ ಮಹಾರಥಃ |
ಪೂಜನೀಯಶ್ಚ ಮಾನ್ಯಶ್ಚ ಭವಾನ್ಪ್ರಾಪ್ತಃ ಪ್ರಿಯಾತಿಥಿಃ ||
ರಾಘವ, ನೀನು ಎಲ್ಲಾ ಲೋಕಗಳಿಗೂ ರಾಜನಾಗಿರುವೆ, ಧರ್ಮ ಪ್ರವರ್ತಕನಾಗಿರುವೆ, ಮಹಾರಥನೂ ಆಗಿರುವೆ, ಇಂದು ನೀನು ನನಗೆ ಅತಿಪ್ರಿಯನಾದ ಅತಿಥಿಯ ರೂಪದಲ್ಲಿ ಆಗಮಿಸಿರುವೆ, ಆದುದರಿಂದಲೇ ನೀನು ನಮಗೆ ಪೂಜ್ಯನೂ ಮಾನ್ಯನೂ ಆಗಿರುವೆ.