ಶನಿವಾರಸಂತೆ, ಮಾ. 7: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿ.ಐ.ಟಿ.ಯು ವತಿಯಿಂದ ಗ್ರಾಮ ಪಂಚಾಯಿತ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಪಂಚಾಯಿತಿ ಸಿಬ್ಬಂದಿಗಳ ಬಾಕಿ ವೇತನ, ಸರ್ಕಾರ ನಿಗದಿಪಡಿಸಿರುವ ವೇತನ, ಪಿಂಚಣಿ, ಇ.ಎಫ್.ಎಸ್. ತಿದ್ದುಪಡಿ ಸರ್ಕಾರಿ ನೌಕರರಿಗೆ ನೀಡುತ್ತಿರುವ ಸೌಲಭ್ಯಗಳನ್ನೇ ಪಂಚಾಯಿತಿ ನೌಕರರಿಗೆ ನೀಡುವಂತೆ ಹಾಗೂ ಹಿಂದಿನ ಸರ್ಕಾರದ ಗೈಡ್ ಲೈನ್ ಜಾರಿಗೊಳಿಸುವಂತೆ ಆಗ್ರಹಿಸಿ ಬೇಡಿಕೆಗಳ ಮನವಿಪತ್ರವನ್ನು ಪಂಚಾಯಿತಿ ಉಪಾಧ್ಯಕ್ಷ ಅಹಮ್ಮದ್ ಅವರ ಮುಖಾಂತರ ಸರ್ಕಾರಕ್ಕೆ ಸಲ್ಲಿಸಿದರು.

ಸಂಘದ ಪದಾಧಿಕಾರಿ ದೊಡ್ಡಪ್ಪ, ಪಂಚಾಯಿತಿ ನೌಕರರಾದ ಜೀವನ್, ಚಂದ್ರಶೇಖರ್, ಉಮರ್, ಲೋಕೇಶ್, ರಾಜೇಶ್, ದರ್ಮಪ್ಪ, ಇತರರು ಹಾಜರಿದ್ದರು.