ಪೆರಾಜೆ, ಮಾ. 7: ಪಯಸ್ವಿನಿ ಬಳಗ ಪೆರಾಜೆ ಆಶ್ರಯದಲ್ಲಿ ಸಾಹಿತಿ ಹಾಗೂ ಶಿಕ್ಷಕ ದಿ. ಕೇಶವ ಪೆರಾಜೆ ಇವರ ಸ್ಮರಣಾರ್ಥ ಸಾರ್ವಜನಿಕ ಪುರುಷರ ಗುಡ್ಡಗಾಡು ಓಟ ಸ್ಪರ್ಧೆಯು ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನ ಮುಂಭಾಗದ ಕಾವೇರಿ ಗದ್ದೆಯಿಂದ ಆರಂಭಗೊಂಡು ಅಮೆಚೂರು ಗಡಿಗುಡ್ಡೆಗಾಗಿ ಜ್ಯೋತಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು.
ಪ್ರಥಮ ಸ್ಥಾನವನ್ನು ಕುಶಾಲನಗರದ ಶ್ರೀಧರ ಎಸ್.ಎನ್ ಪಡೆದುಕೊಂಡರೆ, ದ್ವಿತೀಯ ಆಳ್ವಾಸ್‍ನ ಓಂಕಾರ್ ಪಾಟೀಲ್, ತೃತೀಯ ರಾಹುಲ್ ಆಳ್ವಾಸ್, ಚತುರ್ಥ ಸ್ಥಾನವನ್ನು ಮಂಡ್ಯದ ಎಸ್.ಬಿ. ಲಿಖಿತ್ ಗೌಡ ಪಡೆದುಕೊಂಡರು.
ಶಾಸ್ತಾವು ದೇವಸ್ಥಾನ ಮುಂಭಾಗದಲ್ಲಿ ಆರಂಭಗೊಂಡ ಗುಡ್ಡಗಾಡು ಓಟಕ್ಕೆ ಪೆರಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಚಾಲನೆ ನೀಡಿದರು.
ನಂತರ ಜ್ಯೋತಿ ಪ್ರೌಢಶಾಲೆಯಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪಯಸ್ವಿನಿ ಬಳಗದ ಅಧ್ಯಕ್ಷ ಹಾಗೂ ಮಡಿಕೇರಿ ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಾದವ ಪೆರಾಜೆ, ಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ. ಜ್ಞಾನೇಶ್ ನಿಡ್ಯಮಲೆ, ಉಪಸ್ಥಿತರಿದ್ದರು. ಸ್ಪರ್ಧೆಯ ವಿಜೇತರಿಗೆ ಪೆರಾಜೆ ಗ್ರಾ.ಪಂ.ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ ಬಹುಮಾನ ವಿತರಿಸಿದರು.