ವೀರಾಜಪೇಟೆ, ಮಾ. 7: ವೀರಾಜಪೇಟೆ ಬಳಿಯ ಕುಕ್ಲೂರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುವ ಮುತ್ತಪ್ಪ ದೇವರ ತೆರೆ ಮಹೋತ್ಸವವನ್ನು ತಾ. 11 ಹಾಗೂ 12 ರಂದು ಆಚರಿಸಲಾಗುವುದು ಎಂದು ಆಡಳಿತ ಮಂಡಳಿಯ ಕೆ.ಆರ್. ಹರ್ಷ ತಿಳಿಸಿದ್ದಾರೆ.

ಮುತ್ತಪ್ಪ ತೆರೆ ಮಹೋತ್ಸವದ ಪ್ರಯುಕ್ತ ತಾ. 11 ರಂದು ಸಂಜೆ 6 ಗಂಟೆಯಿಂದ ಮುತ್ತಪ್ಪ ವೆಳ್ಳಾಟಂ, ರಾತ್ರಿ 7.30 ಗಂಟೆಯಿಂದ ಶಾಸ್ತಪ್ಪ ವೆಳ್ಳಾಟಂ, ರಾತ್ರಿ 9 ಗಂಟೆಯಿಂದ ಗುಳಿಗ ವೆಳ್ಳಾಟಂ, ರಾತ್ರಿ 10.30 ರಿಂದ ಬಸುರಿಮಲ ವೆಳ್ಳಾಟಂ ನಡೆಯಲಿದೆ. ತಾ. 12 ರಂದು ಬೆಳಗಿನ ಜಾವ ಕರಿಂಗುಟ್ಟಿ ಶಾಸ್ತಪ್ಪನ್ ಬೆಳ್ಳಾಟ್, 4 ಗಂಟೆಗೆ ಗುಳಿಗನ ತೆರೆ, ಮುತ್ತಪ್ಪನ್ ಹಾಗೂ ತಿರುವಪ್ಪನ್ ತೆರೆ, ಬೆಳಿಗ್ಗೆ 7ಗಂಟೆಗೆ ಶಾಸ್ತಪ್ಪನ್ ತೆರೆ, 10ಗಂಟೆಗೆ ಕರಿಂಗುಟ್ಟಿ ಶಾಸ್ತಪ್ಪನ್ ವಿಶೇಷ ತೆರೆ ಹಾಗೂ ಅಪರಾಹ್ನ 12ಗಂಟೆಗೆ ಬಸುರಿಮಲ ತೆರೆ ಜರುಗಲಿದೆ.

ಉತ್ಸವದ ಪ್ರಯುಕ್ತ ತಾ. 11 ರಂದು ರಾತ್ರಿ 8.30ಗಂಟೆಗೆ ಹಾಗೂ ತಾ. 12 ರಂದು ಅಪರಾಹ್ನ 12 ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.