ಕುಶಾಲನಗರ, ಮಾ. 8: ಬಡವರಿಗೆ ಕಡಿಮೆ ಬೆಲೆಯಲ್ಲಿ ಔಷಧಿಗಳು ಲಭ್ಯವಾಗುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ತೆರೆಯಲಾಗಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆಯುವಂತಾಗಬೇಕು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದ್ದಾರೆ.
ಅವರು ಜನೌಷಧಿ ದಿನ ಸಂಭ್ರಮಾಚರಣೆ ಅಂಗವಾಗಿ ಕುಶಾಲನಗರ ರಥಬೀದಿಯಲ್ಲಿರುವ ಔಷಧಿ ಮಳಿಗೆಗೆ ಭೇಟಿ ನೀಡಿ ಶ್ರೇಷ್ಠ ಗುಣಮಟ್ಟದ ಔಷಧಿಗಳನ್ನು ಸಾಮಾನ್ಯ ಬೆಲೆಗಳಲ್ಲಿ ಜನರಿಗೆ ಒದಗಿಸುವ ಯೋಜನೆ ಕೇಂದ್ರ ಸರಕಾರ ಕಲ್ಪಿಸಿದ್ದು ಈ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣದ ಉದ್ದೇಶ ಹೊಂದಲಾಗಿದೆ ಎಂದರು.
ಈ ಸಂದರ್ಭ ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪಪಂ ಸದಸ್ಯ ಅಮೃತ್‍ರಾಜ್, ಜಯವರ್ಧನ್, ಬಿಜೆಪಿ ನಗರಾಧ್ಯಕ್ಷ ಕೆ.ಜಿ.ಮನು, ಪ್ರಮುಖರಾದ ಎಂ.ಎನ್.ಕುಮಾರಪ್ಪ, ಎಂ.ಎಂ. ಚರಣ್, ಭರತ್ ಮಾಚಯ್ಯ, ಆದರ್ಶ್, ಮಳಿಗೆಯ ಮಾಲೀಕ ಹರೀಶ್ ಮತ್ತಿತರರು ಇದ್ದರು.