ಮಡಿಕೇರಿ, ಮಾ. 8: ಮಕ್ಕಳ ಸಹಾಯವಾಣಿ ಚೈಲ್ಡ್‍ಲೈನ್ 1098 ಪಾಲನೆ, ಪೋಷಣೆ ಮತ್ತು ರಕ್ಷಣೆಗೆ ಅವಶ್ಯಕತೆ ಇರುವ ಮಕ್ಕಳಿಗಾಗಿ ಒದಗಿಸಲಾಗುವ ತುರ್ತು ದೂರವಾಣಿ ಸಂಪರ್ಕ ಸೇವೆಯಾಗಿದೆ.
ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಸರ್ಕಾರ, ಎನ್.ಜಿ.ಒ, ಕಾರ್ಪೋರೇಟ್ ರಂಗದವರು ಒಟ್ಟುಗೂಡಿ ನಡೆಸಲಾಗುತ್ತಿರುವ ಒಂದು ಅಭಿಯಾನವಾಗಿದೆ.
ಮಕ್ಕಳ ಸಹಾಯವಾಣಿಯ ಕೇಂದ್ರವು ಯಾವುದೇ ನಗರ ಅಥವಾ ಜಿಲ್ಲೆಯಲ್ಲಿ ಸ್ಥಳೀಯ ಸಾರ್ವಜನಿಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸೆಪ್ಟೆಂಬರ್, 25, 2012 ರಿಂದ ಕಾರ್ಯನಿರ್ವ ಹಿಸುತ್ತಿದೆ. ಮಕ್ಕಳ ಸಹಾಯ ವಾಣಿಯು ತನ್ನ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನ ಗೊಳಿಸಲು ಸ್ಥಳೀಯ ಸಾರ್ವಜನಿಕ ಸಂಸ್ಥೆಗಳ ಜೊತೆಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ದೂರವಾಣಿ ಮತ್ತು ಸಾರ್ವಜನಿಕ ಮಾಹಿತಿ ಕೇಂದ್ರ ಹಾಗೂ ಇತರೆ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ದೂರವಾಣಿ ಮತ್ತು ಸಾರ್ವಜನಿಕ ಮಾಹಿತಿ ಕೇಂದ್ರ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವ ಹಿಸುತ್ತಿದೆ. ಚೈಲ್ಡ್‍ಲೈನ್ ಕಾರ್ಯವನ್ನು ನಿರ್ವಹಿಸಲು ಮಕ್ಕಳ ಸಲಹಾ ಸಮಿತಿ ಅವಶ್ಯಕತೆ ಇದ್ದು, ಈ ಸಮಿತಿಯ ಅಧ್ಯಕ್ಷತೆಯನ್ನು ಜಿಲ್ಲೆಯ ಜಿಲ್ಲಾಧಿಕಾರಿಗಳು ವಹಿಸಿರುತ್ತಾರೆ. ಜೊತೆಗೆ ಸಾಮಾನ್ಯವಾಗಿ ಆರು ತಿಂಗಳಿಗೊಮ್ಮೆ ಮಕ್ಕಳ ಸಲಹಾ ಸಮಿತಿ ಸಭೆಯು ನಡೆಯುತ್ತದೆ. ಪೋಷಕರ ನಿರ್ಲಕ್ಷ್ಯ, ಭಿಕ್ಷಾಟನೆ, ಬಾಲಕಾರ್ಮಿಕತೆಗೆ ಒಳಗಾಗಿದ್ದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವುದು, ಪೋಷಕರ ನಿರ್ಲಕ್ಷ್ಯಕ್ಕೆ ಒಳಗಾದ, ನಿರ್ಗತಿಕ ಹಾಗೂ ಅನಾಥ ಮಕ್ಕಳನ್ನು ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಬಾಲ ಮಂದಿರಕ್ಕೆ ಸೇರಿಸುವುದು, ದೌರ್ಜನ್ಯಕ್ಕೆ ಒಳಗಾದ ಬಾಲಕಿಯರ ಪ್ರಕರಣಗಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸುವುದು ಹಾಗೂ ಅಂತಹ ಬಾಲಕಿಯರ ಮುಂದಿನ ರಕ್ಷಣೆ ಮತ್ತು ಪೋಷಣೆಯ ಉದ್ದೇಶದಿಂದ ಬಾಲಕಿಯರ ಬಾಲಮಂದಿರಕ್ಕೆ ಸೇರಿಸುವ ಮೂಲಕ ಪುನರ್ವಸತಿ ಕಲ್ಪಿಸುವುದು, ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಜನಸಾಮಾನ್ಯರಲ್ಲಿ ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ತಿಂಗಳು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ತೆರೆದ ಮನೆ ಹಾಗೂ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗುತ್ತಿದೆ. ಸಾರ್ವಜನಿಕರ ಗಮನಕ್ಕೆ ಇಂತಹ ಮಕ್ಕಳು ಕಂಡುಬಂದಲ್ಲಿ ತಕ್ಷಣ 1098 ಸಂಖ್ಯೆಗೆ ಕರೆಮಾಡಿ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದಾಗಿದೆ.
ಮಗುವೊಂದು ಅಸೌಖ್ಯ ವಾಗಿದ್ದು ಒಂಟಿಯಾಗಿರು ವುದನ್ನು ಕಂಡಾಗ, ಮಗುವಿಗೆ ಆಶ್ರಯದ ಅವಶ್ಯಕತೆ ಇದ್ದಾಗ, ನಿರ್ಗತಿಕ ಹಾಗೂ ಕಾಣೆಯಾದ ಮಗುವನ್ನು ಕಂಡಾಗ, ದೌರ್ಜನ್ಯ ಮತ್ತು ಹಿಂಸೆಗೆ ಒಳಗಾದ ಮಗುವನ್ನು ಕಂಡಾಗ, ಬಾಲಕಾರ್ಮಿಕ, ವಿಕಲಚೇತನ, ಪೋಷಣೆ ಮತ್ತು ಸಂರಕ್ಷಣೆ ಅಗತ್ಯವಿರುವ, ಮಕ್ಕಳ ಬಗ್ಗೆ ಮಾಹಿತಿಯಿದ್ದಲ್ಲಿ ತಿಳಿಸಲು ಕೋರಲಾಗಿದೆ.
ಇದರೊಂದಿಗೆ ಚೈಲ್ಡ್‍ಲೈನ್‍ಗೆ ಸ್ವಯಂ ಸೇವಕರಾಗಲು ಬಯಸಿದ್ದಲ್ಲಿ ಅಂತಹವರಿಗೂ ಸಹ ಅವಕಾಶವನ್ನು ನೀಡಲಾಗುತ್ತದೆ. ಚೈಲ್ಡ್‍ಲೈನ್ ಸಂಕಷ್ಟದಲ್ಲಿರುವ ಹಾಗೂ ಪೋಷಣೆ, ರಕ್ಷಣೆಯ ಅವಶ್ಯಕತೆಯಿರುವ ಮಕ್ಕಳಿಗೆ ದಿನದ 24 ಗಂಟೆಗಳೂ ಉಚಿತ ಮತ್ತು ತುರ್ತುಸೇವೆಯನ್ನು ನೀಡುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ತಿತಿತಿ.ಛಿhiಟಜಟiಟಿeiಟಿಜiಚಿ.oಡಿg.iಟಿ ನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.