ಶನಿವಾರಸಂತೆ, ಮಾ. 7: ವಿಜ್ಞಾನ ಎಂದರೆ ಕೇವಲ ದೊಡ್ಡ ದೊಡ್ಡ ರಾಸಾಯನಿಕಗಳೊಂದಿಗೆ ಚಟುವಟಿಕೆ ನಿರ್ವಹಿಸುವುದಲ್ಲ. ಅಥವಾ ದುಬಾರಿ ತಂತ್ರಜ್ಞಾನ ಬಳಸಿ ರೋಬೋಟ್‍ಗಳನ್ನು ನಿರ್ಮಿಸುವುದು ಮಾತ್ರವಲ.್ಲ ಸರಳ ಚಟುವಟಿಕೆಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸಿ ಸಂಭ್ರಮಪಟ್ಟು ನೇರ ಅನುಭವಗಳ ಮೂಲಕ ಕಲಿಕೆ ಕಟ್ಟಿಕೊಂಡು ಕ್ಷೇತ್ರದಲ್ಲಿ ತಾವಾಗಿಯೇ ಆಸಕ್ತಿ ಹೊಂದುವಂತೆ ಮಾಡುವುದು ಎಂಬುವುದನ್ನರಿತ ಶನಿವಾರಸಂತೆ ಸಮೀಪದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸತೀಶ್ ಸಿ.ಎಸ್. ರಾಷ್ಟ್ರೀಯ ವಿಜ್ಞಾನ ದಿನವನ್ನು ತಮ್ಮ ಶಾಲೆಯಲ್ಲಿ “ವಿದ್ಯಾರ್ಥಿಗಳ ವಿಜ್ಞಾನ ಹಬ್ಬ”ಶೀರ್ಷಿಕೆಯಡಿಯಲ್ಲಿ ವಿನೂತನವಾಗಿ ಕಲಿಕೆಯು ಒಂದು ಸಂಭ್ರಮದ ಹಬ್ಬವಾಗಬೇಕೆಂಬ ನಿಟ್ಟಿನಲ್ಲಿ ಯಾವುದೇ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸದೆ ದಿನಪೂರ್ತಿ ಮಕ್ಕಳು ಆಸಕ್ತಿಯಿಂದ 50ಕ್ಕೂ ಹೆಚ್ಚಿನ ಸರಳ ಪ್ರಯೋಗಗಳನ್ನು ನಿರ್ವಹಿಸಿದರು. ವಿದ್ಯಾರ್ಥಿಗಳನ್ನು ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ , ಸಿ.ವಿ. ರಾಮನ್, ಜೆ.ಸಿ. ಬೋಸ್ ಎಂಬ ಐದು ತಂಡಗಳಾಗಿ ವಿಂಗಡಿಸಿ ಎಲ್ಲಾ ತಂಡಗಳು ತಲಾ ಸುಮಾರು 20 ವೈಜ್ಞಾನಿಕ ಚಟುವಟಿಕೆಗಳನ್ನು ನಿರ್ವಹಿಸಿದರು. ಏರುವ ಹಲ್ಲಿ ಸ್ಪಿಂಕ್ಲರ್, ವಿವಿಧ ಶಕ್ತಿಗಳ ಪರಿಚಯ, ಬೋರ್ವೆಲ್ ಕಾರ್ಯನಿರ್ವಹಣೆ, ವ್ಯಾಕ್ಯೂಮ್ ಕ್ಲೀನರ್, ಸೂರ್ಯಗ್ರಹಣ, ಬಾಲ್‍ಮೌಂಟ್, ಸನ್ ಪ್ರೊಜೆಕ್ಟರ್, ಚಂದ್ರನ ವೃದ್ಧಿ ಕ್ಷಯ, ಬಳಕೆ ಅರಿತುಕೊಂಡ್ಡರು. ನಿರ್ಮಿಸಿದ್ದ ಭಯಾನಕ ಗುಹೆಯೊಳಗೆ ಶಬ್ದ ,ಸ್ಪರ್ಶ, ವಾಸನೆ ರುಚಿ, ಬೆಳಕು ಬೀರುವ ವಸ್ತುಗಳನ್ನು ಇರಿಸಿ ಪಂಚೇಂದ್ರಿಯಗಳ ಅನುಭವವನ್ನು ಪಡೆದುಕೊಂಡರು ಶಾಲಾ ಆವರಣದಲ್ಲಿ ಸುಮಾರು ಹದಿನೈದು ಅಡಿ ಎತ್ತರವಿರುವ ವಿಜ್ಞಾನ ತೇರು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಅದರ ಮುಂದೆ ಸೆಲ್ಫಿ ಪಾಯಿಂಟ್ ನಿರ್ಮಿಸಿ ವಿಜ್ಞಾನಿಗಳೊಂದಿಗೆ ಫೋಟೋ ತೆಗೆಸಿಕೊಂಡ ಅನುಭವ ನೀಡಿದರು. 2020ವಿಜ್ಞಾನ ದಿನವನ್ನು ಮಹಿಳೆಯ ವಿಶೇಷ ವಿಜ್ಞಾನ ದಿನ ಎಂದು ಘೋಷಿಸಿರುವುದರಿಂದ ತೇರಿನ ಮುಂಭಾಗದಲ್ಲಿ “Womeಟಿ iಟಿ sಛಿieಟಿಛಿe” ‘ವಿಜ್ಞಾನದಲ್ಲಿ ಮಹಿಳೆಯರು’ಎಂಬ ಶೀರ್ಷಿಕೆಯಡಿಯಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿದ ಮಹಿಳಾ ವಿಜ್ಞಾನಿಗಳ ಭಾವಚಿತ್ರವನ್ನು ಅನಾವರಣಗೊಳಿಸಲಾಗಿತ್ತು. ಗುಹೆಯೊಳಗೆ ಸೌರವ್ಯೂಹದ ರಚನೆ, ಸೂರ್ಯಗ್ರಹಣ ಚಂದ್ರಗ್ರಹಣ ಧೂಮಕೇತು ರಾತ್ರಿ-ಹಗಲು ಉಂಟಾಗುವುದು, ಪವನ ಶಕ್ತಿಯಿಂದ ಬೆಳಕಿನ ಉತ್ಪಾದನೆ ಮೊದಲಾದವುಗಳ ಪ್ರಾತ್ಯಕ್ಷಿಕೆ ನೀಡಿ ಮನವರಿಕೆ ಮಾಡಿಕೊಡಲಾಯಿತು. ಸಣ್ಣಗ್ರಾಮವೊಂದರ ಪುಟ್ಟ ಶಾಲೆಯಲ್ಲಿ ಇಡಿ ವಿಜ್ಞಾನ ವಿಸ್ಮಯವನ್ನು ಪರಿಚಯಿಸುವ ಕಾರ್ಯ ವಿನೂತನವಾಗಿ ನೆರವೇರಿತು.