ವೀರಾಜಪೇಟೆ, ಮಾ. 7: ಮಕ್ಕಳನ್ನು ವಿದ್ಯೆ ಕಲಿಕೆಗಾಗಿ ಶಾಲೆಗೆ ಕಳುಹಿಸಿದರೆ ಸಾಲದು. ಅವರುಗಳನ್ನು ಎಲ್ಲ ರೀತಿಯಲ್ಲಿ ಪೋಷಿಸಿ ಬೆಳೆಸಲು ಪೋಷಕರು ಸಹಕಾರಿಯಾಗಬೇಕು ಎಂದು ವೀರಾಜಪೇಟೆ ಯೂರೋ ಕಿಡ್ಸ್ ಶಾಲಾ ಸಮಿತಿಯ ಅಧ್ಯಕ್ಷ ಕಲಿಯಂಡ ಪ್ರದೀಪ್ ಹೇಳಿದರು.

ಕೊಡವ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಯುರೋ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ಚೋಂದಮ್ಮ ಪ್ರದೀಪ್, ಎನ್.ಪಿ.ರೀತಾ, ಟ್ರಸ್ಟಿಗಳಾದ ಬೊಟ್ಟೋಳಂಡ ಪಳಂಗಪ್ಪ, ಗುಮ್ಮಟಿರ ಚಂಗಪ್ಪ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಶಾಲೆಯ ಪ್ರಾಂಶುಪಾಲೆ ಬೊಟ್ಟೋಳಂಡ ಪ್ರತಿಮಾ ರಂಜನ್ ವರದಿ ವಾಚಿಸಿದರು. ಪ್ರಾರಂಭದಲ್ಲಿ ಶಿಕ್ಷಕಿ ಲೈಬೋ ಮನ್ನಾ ಸ್ವಾಗತಿಸಿ, ಪುನೀತ್ ವಂದಿಸಿದರು.