ನಾಪೋಕ್ಲು, ಮಾ. 7: ಕೈಕಾಡು ಗ್ರಾಮದ ಮಕ್ಕೋಟು ಶ್ರೀ ಮಹಾಲಕ್ಷ್ಮಿ ದೇವಾಲಯದ ಪುನರ್ ಪ್ರತಿಷ್ಠಾಪನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಮಕ್ಕೋಟು ಮಹಾಲಕ್ಷ್ಮಿ ಭಕ್ತಜನ ಫಂಡ್ ವತಿಯಿಂದ ಏರ್ಪಡಿಸಲಾಗಿದ್ದ ಪುನರ್ ಪ್ರತಿಷ್ಠಾಪನಾ ಮಹೋತ್ಸವ ತಂತ್ರಿಗಳಾದ ಪೃಥ್ವಿಭಟ್ ನೇತೃತ್ವದಲ್ಲಿ ನಡೆಯಿತು. ಸುಮಾರು ರೂ. 60 ಲಕ್ಷ ವೆಚ್ಚದಲ್ಲಿ ನವೀಕರಣಗೊಂಡ ದೇವಾಲಯದಲ್ಲಿ ಪ್ರತಿಷ್ಠಾ ಕಾರ್ಯಗಳು ನೆರವೇರಿದವು. ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಮಹಾಲಕ್ಷ್ಮೀ ದೇವಿಯ ಪುನರ್ ಪ್ರತಿಷ್ಠೆ ಅಂಗವಾಗಿ ರಾತ್ರಿ ವಾಸ್ತು ರಕ್ಷೋಘ್ನ ಹೋಮ ನೆರವೇರಿಸ ಲಾಯಿತು. ಬೆಳಿಗ್ಗೆ ಅಷ್ಟದಿಕ್ಪಾಲಕರ ಸತ್ವ ಮಾಂತ್ರಿಕ ಹೋಮ ನೆರವೇರಿಸಲಾ ಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಅರ್ಚಕರಾದ ಗಣಪತಿ ಭಟ್,ಪರಮೇಶ್ವರ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು. ಪ್ರತಿಷ್ಠಾಪನಾ ಮಹೋತ್ಸವವನ್ನು ನೆರವೇರಿಸಿದ ಕಾಸರಗೋಡಿನ ನಾಪೋಕ್ಲು, ಮಾ. 7: ಕೈಕಾಡು ಗ್ರಾಮದ ಮಕ್ಕೋಟು ಶ್ರೀ ಮಹಾಲಕ್ಷ್ಮಿ ದೇವಾಲಯದ ಪುನರ್ ಪ್ರತಿಷ್ಠಾಪನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಮಕ್ಕೋಟು ಮಹಾಲಕ್ಷ್ಮಿ ಭಕ್ತಜನ ಫಂಡ್ ವತಿಯಿಂದ ಏರ್ಪಡಿಸಲಾಗಿದ್ದ ಪುನರ್ ಪ್ರತಿಷ್ಠಾಪನಾ ಮಹೋತ್ಸವ ತಂತ್ರಿಗಳಾದ ಪೃಥ್ವಿಭಟ್ ನೇತೃತ್ವದಲ್ಲಿ ನಡೆಯಿತು. ಸುಮಾರು ರೂ. 60 ಲಕ್ಷ ವೆಚ್ಚದಲ್ಲಿ ನವೀಕರಣಗೊಂಡ ದೇವಾಲಯದಲ್ಲಿ ಪ್ರತಿಷ್ಠಾ ಕಾರ್ಯಗಳು ನೆರವೇರಿದವು. ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಮಹಾಲಕ್ಷ್ಮೀ ದೇವಿಯ ಪುನರ್ ಪ್ರತಿಷ್ಠೆ ಅಂಗವಾಗಿ ರಾತ್ರಿ ವಾಸ್ತು ರಕ್ಷೋಘ್ನ ಹೋಮ ನೆರವೇರಿಸ ಲಾಯಿತು. ಬೆಳಿಗ್ಗೆ ಅಷ್ಟದಿಕ್ಪಾಲಕರ ಸತ್ವ ಮಾಂತ್ರಿಕ ಹೋಮ ನೆರವೇರಿಸಲಾ ಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಅರ್ಚಕರಾದ ಗಣಪತಿ ಭಟ್,ಪರಮೇಶ್ವರ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು. ಪ್ರತಿಷ್ಠಾಪನಾ ಮಹೋತ್ಸವವನ್ನು ನೆರವೇರಿಸಿದ ಕಾಸರಗೋಡಿನ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಹರೀಶ್ ಬೋಪಣ್ಣ ಮಾತನಾಡಿ, ಕೈಕಾಡಿನಂತಹ ಪುಟ್ಟ ಗ್ರಾಮದಲ್ಲಿ ಮಹಾಲಕ್ಷ್ಮೀ ದೇವಾಲಯದ ಜೀರ್ಜೋದ್ಧಾರಕ್ಕೆ ಊರಿನ ಅಭಿಮಾನದಿಂದ ಕೈಲಾದ ನೆರವು ನೀಡಿದ್ದೇನೆ ಎಂದರು.

ಹಿರಿಯರಾದ ನಾಯಕಂಡ ಬೋಪಣ್ಣ, ನೆರೆಯಂಡಮ್ಮಂಡ ನಾಣಮ್ಮಯ್ಯ, ಪಾಡೆಯಂಡ ಬೆಳ್ಯಪ್ಪ, ಬಟ್ಟಿಯಂಡ ಪೊನ್ನಪ್ಪ, ಆಡಳಿತ ಮಂಡಳಿ ಕಾರ್ಯದರ್ಶಿ ನಾಯಕಂಡ ಡಿ. ತಿಮ್ಮಯ್ಯ, ಸೇರಿದಂತೆ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು. ನೆರೆಯಂಡಮ್ಮಂಡ ಗೀತಾ ಸುಬ್ರಮಣಿ ಪ್ರಾರ್ಥನೆ ಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಪಾಡೆಯಂಡ ಜಿ. ಮುತ್ತಪ್ಪ ಸ್ವಾಗತಿಸಿ, ದೇವಾಲಯ ಅಭಿವೃದ್ಧಿ ಕುರಿತು ಮಾತನಾಡಿದರು. ನಾಯಕಂಡ ಕುಂಞಣ್ಣ ವಂದಿಸಿದರು.

-ದುಗ್ಗಳ