ಮಡಿಕೇರಿ, ಮಾ. 8: ಸಮಾಜದಲ್ಲಿ ಸಮುದಾಯ ಮತ್ತು ಜನರ ಹೃದಯಗಳನ್ನು ಕಟ್ಟುವ ಕಾರ್ಯ ವಿದ್ಯಾರ್ಥಿಗಳಿಂದ ಆಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲ ಯದ ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶಕ ಪೆÇ್ರ. ಪಿ.ಎಲ್. ಧರ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಫೀಲ್ಡ್ ಮಾಷರ್Àಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆದ 71 ನೇ ವಷರ್Àದ ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
‘ಬಡತನವನ್ನು ಮೀರಿ ಜೀವನದಲ್ಲಿ ಸಾಧನೆ ಮಾಡಿ ಗುರಿ ತಲುಪಲು ಶಿಕ್ಷಣದಿಂದ ಮಾತ್ರವೇ ಸಾಧ್ಯ. ಶಾಂತಿ, ಪ್ರೀತಿಯಿಂದ ಎಲ್ಲರನ್ನು, ಎಲ್ಲಾ ಧರ್ಮ ಸಮುದಾಯಗಳನ್ನು ಗೌರವಿಸುವ ಪ್ರಜ್ಞೆ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದು ಅವರು ಹೇಳಿದರು.
ಬೆಂಗಳೂರಿನ ಸಿಗ್ಮ ನೆಟ್‍ವಕ್ರ್ಸ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಅವರೆಮಾದಂಡ ಶರಣ್ ಪೂಣಚ್ಚ ಮಾತನಾಡಿ ವಿದ್ಯಾರ್ಥಿಗಳಿಗೆ ಫೀ.ಮಾ.ಕಾ.ಕಾಲೇಜು ಸಾಕಷÀ್ಟು ನೀಡಿದೆ. ವಿದ್ಯಾರ್ಜನೆಗೆ ಅಗತ್ಯವಾದ ವಾತಾವರಣ ಕಾಲೇಜಿನಲ್ಲಿದೆ ಎಂದು ಸಲಹೆ ನೀಡಿದರು.
ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು. ತರಗತಿಯಲ್ಲಿ ಕಲಿತದ್ದು ಏನು ಎಂಬುದನ್ನು ಅರಿತುಕೊಳ್ಳುವುದು ಬಹಳ ಮುಖ್ಯ. ವಿದ್ಯಾರ್ಥಿಗಳು ತಮ್ಮಲ್ಲಿನ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರ ಜಗತ್ ತಿಮ್ಮಯ್ಯ, ವಿದ್ಯಾಭ್ಯಾಸ ಮುಗಿಸಿದ ನಂತರ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು.
ಬೆಂಗಳೂರಿನ ಸಿಗ್ಮ ನೆಟ್‍ವಕ್ರ್ಸ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಅವರೆಮಾದಂಡ ಶರಣ್ ಪೂಣಚ್ಚ ಕಾಲೇಜಿಗೆ ಲ್ಯಾಪ್‍ಟಾಪ್ ಕೊಡುಗೆಯಾಗಿ ನೀಡಿದರು. ಪಠ್ಯ ವಿಷಯಗಳಲ್ಲಿ, ಕ್ರೀಡೆ ಮತ್ತು ಎನ್.ಸಿ.ಸಿ ವಿಭಾಗದಲ್ಲಿ ವಿಶೇಷÀ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪದಕಗಳನ್ನು ಪ್ರಧಾನ ಮಾಡಲಾಯಿತು. ವಿವಿಧ ವಿಭಾಗಗಳ ದತ್ತಿ ಬಹುಮಾನವನ್ನು ವಿದ್ಯಾರ್ಥಿ ಗಳಿಗೆ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರತೀಕ್ ಶೆಟ್ಟಿ ಬಿ.ಎಸ್, ಕಾರ್ಯದರ್ಶಿ ಲಿಶಾಲ್ ಬೆನ್ನಿ, ಜಂಟಿ ಕಾರ್ಯದರ್ಶಿಗಳಾದ ಮಂಜುನಾಥ್ ಪಿ.ಆರ್, ಸುಚಿತ್ ಟಿ.ಆರ್, ಅಜಿತ್ ಎಂ.ಎಸ್, ಸೇರಿದಂತೆ ಇತರರು ಇದ್ದರು. ಕಾಲೇಜಿನ ಉಪನ್ಯಾಸಕ ಮೇಜರ್ ರಾಘವ್ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಸಲಹೆಗಾರ ಡಾ. ತಿಪ್ಪೇಸ್ವಾಮಿ ವಾರ್ಷಿಕ ವಿವರ ಓದಿದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮೊನಿಷÀ ಜಿ. ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಲೀನಾ ಕೆ.ಎಲ್. ವಂದಿಸಿದರು.