ಸೋಮವಾರಪೇಟೆ, ಮಾ. 7: ನೆಹರು ಯುವ ಕೇಂದ್ರ ಕೊಡಗು ಜಿಲ್ಲೆ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ತಾಲೂಕು ಯುವ ಒಕ್ಕೂಟ ಸೋಮವಾರಪೇಟೆ ಹಾಗೂ ವಿಜಯಪ್ರಕಾಶ್ ಯುವಕ ಸಂಘ ತೋಳೂರುಶೆಟ್ಟಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸಂತ ಜೋಸೆಫರ ಕಾಲೇಜು ಸಭಾಂಗಣದಲ್ಲಿ “ನೆರೆ-ಹೊರೆ ಯುವಜನ ಸಂಸತ್ತು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಜಯಪ್ರಕಾಶ್ ಯುವಕ ಸಂಘದ ಅಧ್ಯಕ್ಷ ಎ.ಆರ್. ರಜಿತ್ ಹಾಗೂ ಕಾಲೇಜು ಪ್ರಾಂಶುಪಾಲ ಅಂತೋಣಿರಾಜ್ ನೆರವೇರಿಸಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯಿನಿ ಜಲಜಾಶೇಖರ್ ಅವರು ‘ದೇಶದ ಅಭಿವೃದ್ಧಿಯಲ್ಲಿ ಯುವಕ ಹಾಗೂ ಯುವತಿ ಮಂಡಳಿಯ ಪಾತ್ರದ’ ಬಗ್ಗೆ ಮಾಹಿತಿ ನೀಡಿದರು.
ಸಂತ ಜೋಸೆಫರ ಕಾಲೇಜಿನ ಪ್ರಾಂಶುಪಾಲ ಜೆ. ಆಂತೋಣಿರಾಜ್ ಮಾತನಾಡಿ, ‘ಸ್ವಚ್ಛ ಭಾರತ್ ಅಭಿಯಾನದಲ್ಲಿ ಗ್ರಾಮೀಣ ಯುವ ಜನರ ಪಾತ್ರದ’ ಬಗ್ಗೆ ವಿವರಿಸಿದರು.
ಸೋಮವಾರಪೇಟೆಯ ಎಸ್‍ಬಿಐ ಬ್ಯಾಂಕ್‍ನ ಅಸಸ್ಟೆಂಟ್ ಮ್ಯಾನೇಜರ್ ಶ್ರುತಿ ಸೋಮಯ್ಯ ಅವರು, ಜನ್‍ಧನ್ ಯೋಜನೆ ಮತ್ತು ಬ್ಯಾಂಕಿನ ಮೂಲಕ ಅನುಷ್ಠಾನಗೊಳ್ಳುವ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಕಾರ್ಯಕರ್ತರಾದ ಲಕ್ಷ್ಮೀಕಾಂತ್ ಹಾಗೂ ಸಂತೋಷ್ ಕುಮಾರ್, ತಾಲೂಕು ಯುವ ಒಕ್ಕೂಟದ ಸಲಹೆಗಾರ ಕುಶಾಲಪ್ಪ, ತಾಲೂಕು ಯುವ ಒಕ್ಕೂಟದ ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ಆದರ್ಶ್, ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಹರೀಶ್ ಎಂ.ಡಿ., ಆಶ್ವಿನಿ ಕೃಷ್ಣ ಕಾಂತ್, ಪ್ರವೀಣ್ ಕುಮಾರ್, ಸೇರಿದಂತೆ ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಕರು, ಯುವ ಒಕ್ಕೂಟದ ಸದಸ್ಯರು, ವಿಜಯಪ್ರಕಾಸ್ ಯುವಕ ಸಂಘದ ಸದಸ್ಯರು ಹಾಜರಿದ್ದರು.