ಸೋಮವಾರಪೇಟೆ, ಮಾ. 7: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡೇರ ಕುಟುಂಬಸ್ಥರು ತೆರಳುವ ಮಾರ್ಗ ಮಧ್ಯೆ ನಿರ್ಮಾಣಗೊಳ್ಳುತ್ತಿರುವ ಸೇತುವೆ ಮತ್ತು ರಸ್ತೆ ಕಾಮಗಾರಿ ವಿಳಂಬ ವಾಗಿರುವದರಿಂದ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ರೂ. 10 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲು ಮುಂದಾಗಿರುವ ಸೇತುವೆ ಮತ್ತು ರಸ್ತೆ ಕಾಮಗಾರಿ ಪ್ರಾರಂಭವಾಗಿ 6 ತಿಂಗಳು ಕಳೆದಿದೆ. ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಜಿಲ್ಲಾ ಪಂಚಾಯಿತಿಯಿಂದ ಹಣ ಬಿಡುಗಡೆಯಾಗಿತ್ತು. ಅರ್ಧಂಬರ್ಧ ಕಾಮಗಾರಿ ಮಾಡಿ ಇದೀಗ ಸ್ಥಗಿತಗೊಳಿಸಿದ್ದಾರೆ. ಸೇತುವೆಗೆ ತಡೆಗೋಡೆ ಹಾಗೂ ರಸ್ತೆ ಮಾಡದಿರುವದರಿಂದ ಇಲ್ಲಿ ಸಂಚರಿಸಲು ತೊಡಕಾಗಿದೆ ಎಂದು ಆರೋಪಿಸಿದ್ದಾರೆ.
ಕೂಡಲೇ ಕಾಮಗಾರಿಯನ್ನು ಮುಗಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಗ್ರಾಮದ ಡಿ.ಕೆ. ಕಾವೇರಪ್ಪ, ಸುಧಿ ಬೆಳ್ಯಪ್ಪ, ಡಿ.ಟಿ. ರಮೇಶ್, ಡಿ.ಟಿ. ಪೊನ್ನಪ್ಪ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.