ನಾಪೋಕ್ಲು, ಮಾ. 8: ನೆಲಜಿ ಗ್ರಾಮದ ಅಂಬಲ ಮಹಿಳಾ ಸಮಾಜದ ವತಿಯಿಂದ ಇದೇ ಮೊದಲ ಬಾರಿಗೆ ಜಿಲ್ಲಾಮಟ್ಟದ ಮುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮವನ್ನು ತಾ. 22 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷೆ ಮಣವಟ್ಟೀರ ಕಮಲ ಬೆಳ್ಯಪ್ಪ ಮತ್ತು ಅಪ್ಪುಮಣಿಯಂಡ ಡೇಸ್ಸಿ ಸೋಮಣ್ಣ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಗೋಷ್ಠಿಯಲ್ಲಿ ಅವರು ಮಾತನಾಡಿದರು. ನೆಲಜಿ ಗ್ರಾಮದ ಅಂಬಲ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದಲ್ಲಿ ಗಂಡು, ಹೆಣ್ಣು ಬೇಧವಿಲ್ಲದೆ ಮುಕ್ತವಾಗಿ ಜಿಲ್ಲೆಯ ಜನರು ಪಾಲ್ಗೊಳ್ಳಬಹುದಾಗಿದೆ ಎಂದರು. ವಿಜೇತರಾದರಿಗೆ ರೂ. 10 ಸಾವಿರ ನಗದಿನೊಂದಿಗೆ ಟ್ರೋಫಿಯನ್ನು ನೀಡಲಾಗುವುದು. ದ್ವಿತೀಯ ಸ್ಥಾನ ಪಡೆದವರಿಗೆ ರೂ. 5 ಸಾವಿರ ನಗದು ಟ್ರೋಫಿ ಮತ್ತು ತೃತೀಯ ಸ್ಥಾನ ಪಡೆದವರಿಗೆ ರೂ. 3 ಸಾವಿರ ಮತ್ತು ಟ್ರೋಫಿಯನ್ನು ನೀಡಲಾಗುವುದು ಎಂದರು.

ಅದರಂತೆ ಬಲ್ಲಮಾವಟಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ಗ್ರಾಮಸ್ಥರಿಗೆ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಹಗ್ಗಜಗ್ಗಾಟ ಸ್ವರ್ಧೆಯನ್ನು ಅದೇ ದಿನ ಏರ್ಪಡಿಸಲಾಗಿದ್ದು, ಇದರಲ್ಲಿ ವಿಜೇತರಾದವÀರಿಗೆ ಪ್ರಥಮ ರೂ. 5 ಸಾವಿರ ಮತ್ತು ದ್ವಿತೀಯ ರೂ. 3 ಸಾವಿರ ನಗದು ಸೇರಿದಂತೆ ಟ್ರೋಫಿಯನ್ನು ನೀಡಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಬಾಳೆಯಡ ಮೀನಾ ಬೆಳ್ಯಪ್ಪ, ಚಿಯಕ್‍ಪೂವಂಡ ಚಿತ್ರ ತಿಮ್ಮಯ್ಯ, ಮಣವಟ್ಟೀರ ಜಾನ್ಸಿ ತಿಮ್ಮಯ್ಯ, ಚಿಯಕ್‍ಪೂವಂಡ ಅಶ್ವಿನಿ ಉತ್ತಯ್ಯ, ಚಿಯಕ್‍ಪೂವಂಡ ಚಂಪಾ ಅಯ್ಯಮ್ಮ, ಕೊಟೇರ ಪ್ರೇಮ ಕಾವೇರಪ್ಪ, ಮಣವಟ್ಟೀರ ಸುಶೀಲ ಚಂಗಪ್ಪ ಇದ್ದರು.