ಮಡಿಕೇರಿ, ಮಾ. 6 : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಸಹಯೋಗದೊಂದಿಗೆ ತುಳು ಭಾಷಿಕ ಸಾಹಿತಿಗಳು ಹಾಗೂ ಕಲಾವಿದರುಗಳ ಸಭೆ ಮಾರ್ಚ್ ಕೊನೆ ವಾರದಲ್ಲಿ ಮಡಿಕೇರಿಯಲ್ಲಿ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ.ರವಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗು ಜಿಲ್ಲೆಯಲ್ಲಿ ತುಳು ಭಾಷಿಕರ ಸಂಖ್ಯೆ ಎರಡು ಲಕ್ಷಕ್ಕೂ ಮೇಲ್ಪಟ್ಟಿದ್ದು, ಅವರನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸುವುದು ಮತ್ತು ಜಿಲ್ಲೆಯಲ್ಲಿ ತುಳು ಸಾಹಿತ್ಯ, ಸಂಸ್ಕೃತಿ, ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕಿದೆ. ತುಳು ಭಾಷೆಯ ಬೆಳವಣಿಗೆಗೆ ಮತ್ತು ಪದ್ಧತಿ ಪರಂಪರೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ತುಳು ಭಾಷಿಕ ಸಮುದಾಯದ ಸಾಹಿತಿಗಳು ಹಾಗೂ ಕಲಾವಿದರುಗಳ ಸಭೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಜಿಲ್ಲೆಯ ತುಳುಭಾಷಿಕ ಸಾಹಿತಿಗಳು, ಯಕ್ಷಗಾನ ಕಲಾವಿದರು, ನಾಟಕ ಕಲಾವಿದರು, ನಿರೂಪಕರು, ನೃತ್ಯಗಾರರು, ಸಂಗೀತಗಾರರು, ಭರತನಾಟ್ಯ ಕಲಾವಿದರು, ಚಿತ್ರಕಲಾವಿದರು, ಕವನಗಳು, ಕತೆ, ಕಾದಂಬರಿಯ ಲೇಖಕರು, ಸಿನಿಮಾ ನಟರು, ನಿರ್ಮಾಪಕರು, ಕಿರುಚಿತ್ರ ನಿರ್ಮಾಪಕರು, ದೈವರಾಧನೆ, ಭೂತಾರಾಧನೆ ನಡೆಸುವವರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡವರನ್ನು ಕೂಡ ಮುಂದಿನ ಸಭೆಗೆ ಆಹ್ವಾನಿಸಲಾಗುವುದು. ಹೆಚ್ಚಿನ ಮಾಹಿತಿಗೆ 9972073295 ನ್ನು ಸಂಪರ್ಕಿಸಬಹುದಾಗಿದೆ.