ಗುಡ್ಡೆಹೊಸೂರು, ಮಾ. 8: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಕಾಲೋನಿಗೆ ಚಿತ್ರದುರ್ಗದ ಕೇತೇಶ್ವರ ಮಹಾಪೀಠದಿಂದ ಜ್ಯೋತಿಯೊಂದಿಗೆ ಆಗಮಿಸಿದ ಇಮ್ಮಡಿ ಬಸವ ಕೇತೇಶ್ವರ ಸ್ವಾಮಿಗಳು ಇಲ್ಲಿನ ಗಣಪತಿ ದೇವಸ್ಥಾನದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮೇದರ ಜನಾಂಗ ಬಾಂಧವರಿಗೆ ಆಶೀರ್ವಚನ ನೀಡಿದರು.
ಈ ಸಂದರ್ಭ ಮಾತನಾಡಿದ ಸ್ವಾಮಿಗಳು ನಮ್ಮ ಜನಾಂಗ ಬಾಂಧವರು ಸಂಘಟಿತರಾಗಿ ಸಮಾಜದಲ್ಲಿ ಒಟ್ಟು ಸೇರುವಂತೆ ಮಾಡಲು ಇಡೀ ಕರ್ನಾಟಕದಾದ್ಯಂತ ಜಾಥಾ ನಡೆಸಿ ಒಟ್ಟು ಸೇರಿಸುವ ಉದ್ದೇಶದಿಂದ ಜಾಗೃತಿ ಮೂಡಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭ ಮೇದರ ಕುಟುಂಬದವರು, ಸ್ವಾಮೀಜಿಯವರ ಪಾದಪೂಜೆ ನಡೆಸಿದರು. ತಾ.ಪಂ. ಸದಸ್ಯೆ ಪುಷ್ಪ ಜನಾರ್ಧನ, ಜಗದೀಶ್, ಧರ್ಮರಾಜ್, ಮೋಹನ್, ಆಶಾ, ಕೀರ್ತಿ, ಧನಲಕ್ಷ್ಮೀ, ತುಳಸಿ, ಪರಮೇಶ್ ಮುಂತಾದವರು ಹಾಜರಿದ್ದರು.