ಸಿದ್ದಾಪುರ, ಮಾ. 6: ಮನೆಯ ಕೋಣೆಯ ಒಳಗಿದ್ದ ನಾಗರ ಹಾವೊಂದನ್ನು ಸೆರೆ ಹಿಡಿಯುವಲ್ಲಿ ಉರಗ ತಜ್ಞ ಸುರೇಶ್ ಪೂಜಾರಿ ಯಶಸ್ವಿಯಾಗಿದ್ದಾರೆ. ಗುಹ್ಯ ಗ್ರಾಮದ ರತೀಶ್ ಎಂಬವರ ಮನೆಯ ಕೋಣೆಯ ಒಳಗೆ ಇದ್ದ ಬೃಹತ್ ಗಾತ್ರದ ನಾಗರ ಹಾವನ್ನು ಗುಹ್ಯ ಗ್ರಾಮದ ಉರಗ ತಜ್ಞ ಸುರೇಶ್ ಪೂಜಾರಿ ಸೆರೆ ಹಿಡಿದು ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ. ಸುರೇಶ್ ಈಗಾಗಲೇ 250ಕ್ಕೂ ಅಧಿಕ ಹಾವುಗಳನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಮನೆಯ ಒಳಗೆ ಹಾವುಗಳು ಕಂಡು ಬಂದಲ್ಲಿ ಈ ಬಗ್ಗೆ ಸುರೇಶ್ ಅವರ ಮೊಬೈಲ್ ಸಂಖ್ಯೆ 8277131863 ಸಂಪರ್ಕಿಸುವಂತೆ ತಿಳಿಸಿದ್ದಾರೆ.