ಮಡಿಕೇರಿ, ಮಾ. 6: ಡಾ. ಕಿರಣ್‍ಕುಮಾರ್ ಪುತ್ತೂರು ಸಾರಥ್ಯದ ಪುತ್ತೂರಿನ ಗಾನಸಿರಿ ಕಲಾ ಕೇಂದ್ರದ ಮಡಿಕೇರಿ ಶಾಖೆ ತಾ. 10 ರಂದು ಸಂಜೆ 5.30ಕ್ಕೆ ಇಲ್ಲಿನ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಸ್ಥಾನದ ವಠಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಗಾನಸಿರಿ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಮಡಿಕೇರಿ ಶಾಖೆಯಲ್ಲಿ ಪ್ರತಿ ಮಂಗಳವಾರ ಸಂಜೆ 5 ರಿಂದ 7 ರವರೆಗೆ ತರಗತಿಗಳು ನಡೆಯಲಿದ್ದು, ಗಾಯಕ, ಗಾಯಕಿಯರಾಗಲು ಆಸಕ್ತಿ ಇರುವವರು ಮೊ. 8550000893 ಮೂಲಕ ಸಂಸ್ಥೆಯ ಅಧ್ಯಕ್ಷರನ್ನು ಸಂಪರ್ಕಿಸಬಹುದು.
ಉದ್ಘಾಟನೆ ಬಳಿಕ ಗಾನಸಿರಿ ಗಾಯನ ತಂಡದ ಸುಪ್ರಸಿದ್ಧ ಗಾಯಕ,ಗಾಯಕಿಯರ ಭಾಗವಹಿಸುವಿಕೆಯಲ್ಲಿ ಸುಮಧುರ ಗೀತಾಂಜಲಿ ಕಾರ್ಯಕ್ರಮ ನಡೆಯಲಿದೆ.