ಮಡಿಕೇರಿ, ಮಾ. 5: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ ಪ್ರತಿಭೋತ್ಸವ ಮತ್ತು 71ನೇ ಕಾಲೇಜು ವಾರ್ಷಿಕೋತ್ಸವ ತಾ. 6 ಮತ್ತು 7 ರಂದು ಬೆಳಿಗ್ಗೆ 10.30 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

ಪ್ರತಿಭೋತ್ಸವದಲ್ಲಿ ನಿವೃತ್ತ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ಬೆಂಗಳೂರು ಒಲಂಪಿಯನ್ ಹಾಗೂ ಸಮಾಜ ಸೇವಕ ಲೆಫ್ಟಿನೆಂಟ್ ಕರ್ನಲ್ ಬಾಳೆಯಂಡ ಕೆ. ಸುಬ್ರಮಣಿ, ಪ್ರಾಂಶುಪಾಲರು ಮತ್ತು ಅಧ್ಯಕ್ಷ ಡಾ. ಸಿ. ಜಗತ್ ತಿಮ್ಮಯ್ಯ, ವಿದ್ಯಾರ್ಥಿ ಸಂಘದ ಸಲಹೆಗಾರ ಡಾ. ಈ. ತಿಪ್ಪೆಸ್ವಾಮಿ, ಸದಸ್ಯ ಚಟುವಟಿಕೆ ಸಂಚಾಲಕಿ ಡಾ. ಹೆಚ್.ಕೆ. ರೇಣುಶ್ರೀ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಇತರರು ಪಾಲ್ಗೊಳಲಿದ್ದಾರೆ.

ವಾರ್ಷಿಕೋತ್ಸವಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಡೀನ್, ಕಲಾ ನಿಕಾಯ ನಿರ್ದೇಶಕರು ಕಾಲೇಜು ಅಭಿವೃದ್ಧಿ ಸಮಿತಿಯ ಪ್ರೊ. ಧರ್ಮ ಪಿ.ಎಲ್, ಬೆಂಗಳೂರು ಸಿಗ್ಮ ನೆಟ್‍ವಕ್ರ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಅವರೆಮಾದಂಡ ಶರಣ್ ಪೂಣಚ್ಚ, ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಇತರರು ಪಾಲ್ಗೊಳಲಿದ್ದಾರೆ.