ವಿಶ್ವ ಶ್ರವಣ ದಿನ

ಮಡಿಕೇರಿ, ಮಾ. 5: ಪ್ರತಿಯೊಬ್ಬರ ದೇಹದ ಅಂಗಗಳಲ್ಲಿ ಶ್ರವಣವೂ ಅತಿ ಪ್ರಮುಖವಾಗಿದೆ. ಶ್ರವಣದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿದ್ದು, ಆ ನಿಟ್ಟಿನಲ್ಲಿ ಶ್ರವಣ ದೋಷ ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬೇಕು ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಬಿ.ಕೆ. ಕಾರ್ಯಪ್ಪ ಸಲಹೆ ಮಾಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣ ಕಾರ್ಯಕ್ರಮ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಮೈಸೂರು-ಬಾಹ್ಯ ಸೇವಾ ಕೇಂದ್ರ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಶ್ರವಣ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮೈಸೂರಿನ ಆಲ್ ಇಂಡಿಯಾ ಸ್ಪೀಚ್ ಅಂಡ್ ಹಿಯರಿಂಗ್ ನ ಬಾಹ್ಯ ಸೇವಾ ಕೇಂದ್ರವಿದ್ದು, ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ಶ್ರವಣ ದೋಷ ನಿಯಂತ್ರಣಕ್ಕೆ ಎಲ್ಲಾ ರೀತಿಯ ಚಿಕಿತ್ಸಾ ಸೌಲಭ್ಯಗಳು ಇದ್ದು, ಇವುಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶ್ರವಣದೋಷ ನಿಯಂತ್ರಣ ವಿಭಾಗದ ನೋಡಲ್ ಅಧಿಕಾರಿ ಡಾ. ಆನಂದ್ ಮಾತನಾಡಿ, ಇಯರ್ ಫೋನ್ ಬಳಸುವಾಗಲು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ಒಂದು ಕ್ಷಣ ಶಬ್ದಗಳೇ ಇಲ್ಲದ ಪ್ರಪಂಚ ಊಹಿಸಿಕೊಳ್ಳುವುದು ಅಸಾಧ್ಯ, ಅಭಿಪ್ರಾಯ ಹಂಚಿಕೊಳ್ಳಲು ಶ್ರವಣ ಪ್ರಮುಖ ಅಂಗ. ಮನಃ ಸಂತೋಷಕ್ಕಾಗಿ ಸಂಗೀತ ಆಲಿಸಲಾಗುವುದಿಲ್ಲ. ಆಗ ಹುಟ್ಟಿದ ಮಕ್ಕಳು ನಾವಾಡುವ ಮಾತಗಳನ್ನು ಕೇಳದಿದ್ದರೆ ಅದನ್ನು ಕಲಿಯಲಾರದೆ ಮೂಕರಾಗಿ ಉಳಿದುಬಿಡುತ್ತಾರೆ. ಇಷ್ಟೆಲ್ಲ ಜೀವನದಲ್ಲಿ ಬೆರೆತಿರುವ ಶ್ರವಣ ಶಕ್ತಿಯನ್ನು ಉಳಿಸಿಕೊಳ್ಳುವುದು ಬಹು ಮುಖ್ಯ ಎಂದು ಡಾ. ಆನಂದ್ ಅವರು ಹೇಳಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀಕ್ಷಕ ಎ.ಜೆ. ಲೋಕೇಶ್ ಮಾತನಾಡಿ, ಆರೋಗ್ಯಕ್ಕೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಶ್ರವಣ ದೋಷ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಶ್ರವಣ ದೋಷ ಉಂಟಾದಲ್ಲಿ ಜಿಲ್ಲಾಸ್ಪತ್ರೆಗೆ ಆಗಮಿಸಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುವಂತಾಗಬೇಕು ಎಂದು ಸಲಹೆ ಮಾಡಿದರು.

ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ವಿಶಾಲ್ ಕುಮಾರ್ ಮಾತನಾಡಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಇಎನ್‍ಟಿ ವಿಭಾಗದ ಮುಖ್ಯಸ್ಥೆ ಡಾ. ಶ್ವೇತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಟಿ.ಎಸ್. ಅರುಂಧತಿ ಮಾತನಾಡಿದರು.

ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ವತಿಯಿಂದ ಹಿರಿಯ ನಾಗರಿಕರಿಗೆ ಶ್ರವಣ ಯಂತ್ರ ವಿತರಿಸಲಾಯಿತು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಮೇರಿ ನಾಣಯ್ಯ, ಜಿಲ್ಲಾ ವಿಶೇಷಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವಿಶ್ವ ಶ್ರವಣ ದಿನ

ಮಡಿಕೇರಿ, ಮಾ. 5: ಪ್ರತಿಯೊಬ್ಬರ ದೇಹದ ಅಂಗಗಳಲ್ಲಿ ಶ್ರವಣವೂ ಅತಿ ಪ್ರಮುಖವಾಗಿದೆ. ಶ್ರವಣದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿದ್ದು, ಆ ನಿಟ್ಟಿನಲ್ಲಿ ಶ್ರವಣ ದೋಷ ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬೇಕು ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಬಿ.ಕೆ. ಕಾರ್ಯಪ್ಪ ಸಲಹೆ ಮಾಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣ ಕಾರ್ಯಕ್ರಮ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಮೈಸೂರು-ಬಾಹ್ಯ ಸೇವಾ ಕೇಂದ್ರ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಶ್ರವಣ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮೈಸೂರಿನ ಆಲ್ ಇಂಡಿಯಾ ಸ್ಪೀಚ್ ಅಂಡ್ ಹಿಯರಿಂಗ್ ನ ಬಾಹ್ಯ ಸೇವಾ ಕೇಂದ್ರವಿದ್ದು, ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ಶ್ರವಣ ದೋಷ ನಿಯಂತ್ರಣಕ್ಕೆ ಎಲ್ಲಾ ರೀತಿಯ ಚಿಕಿತ್ಸಾ ಸೌಲಭ್ಯಗಳು ಇದ್ದು, ಇವುಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶ್ರವಣದೋಷ ನಿಯಂತ್ರಣ ವಿಭಾಗದ ನೋಡಲ್ ಅಧಿಕಾರಿ ಡಾ. ಆನಂದ್ ಮಾತನಾಡಿ, ಇಯರ್ ಫೋನ್ ಬಳಸುವಾಗಲು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ಒಂದು ಕ್ಷಣ ಶಬ್ದಗಳೇ ಇಲ್ಲದ ಪ್ರಪಂಚ ಊಹಿಸಿಕೊಳ್ಳುವುದು ಅಸಾಧ್ಯ, ಅಭಿಪ್ರಾಯ ಹಂಚಿಕೊಳ್ಳಲು ಶ್ರವಣ ಪ್ರಮುಖ ಅಂಗ. ಮನಃ ಸಂತೋಷಕ್ಕಾಗಿ ಸಂಗೀತ ಆಲಿಸಲಾಗುವುದಿಲ್ಲ. ಆಗ ಹುಟ್ಟಿದ ಮಕ್ಕಳು ನಾವಾಡುವ ಮಾತಗಳನ್ನು ಕೇಳದಿದ್ದರೆ ಅದನ್ನು ಕಲಿಯಲಾರದೆ ಮೂಕರಾಗಿ ಉಳಿದುಬಿಡುತ್ತಾರೆ. ಇಷ್ಟೆಲ್ಲ ಜೀವನದಲ್ಲಿ ಬೆರೆತಿರುವ ಶ್ರವಣ ಶಕ್ತಿಯನ್ನು ಉಳಿಸಿಕೊಳ್ಳುವುದು ಬಹು ಮುಖ್ಯ ಎಂದು ಡಾ. ಆನಂದ್ ಅವರು ಹೇಳಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀಕ್ಷಕ ಎ.ಜೆ. ಲೋಕೇಶ್ ಮಾತನಾಡಿ, ಆರೋಗ್ಯಕ್ಕೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಶ್ರವಣ ದೋಷ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಶ್ರವಣ ದೋಷ ಉಂಟಾದಲ್ಲಿ ಜಿಲ್ಲಾಸ್ಪತ್ರೆಗೆ ಆಗಮಿಸಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುವಂತಾಗಬೇಕು ಎಂದು ಸಲಹೆ ಮಾಡಿದರು.

ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ವಿಶಾಲ್ ಕುಮಾರ್ ಮಾತನಾಡಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಇಎನ್‍ಟಿ ವಿಭಾಗದ ಮುಖ್ಯಸ್ಥೆ ಡಾ. ಶ್ವೇತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಟಿ.ಎಸ್. ಅರುಂಧತಿ ಮಾತನಾಡಿದರು.

ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ವತಿಯಿಂದ ಹಿರಿಯ ನಾಗರಿಕರಿಗೆ ಶ್ರವಣ ಯಂತ್ರ ವಿತರಿಸಲಾಯಿತು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಮೇರಿ ನಾಣಯ್ಯ, ಜಿಲ್ಲಾ ವಿಶೇಷಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಸಂಪತ್ ಕುಮಾರ್ ಇತರರು ಇದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ಅವರು ನಿರೂಪಿಸಿದರು. ಡಾ. ಪಂಚಮ್ ಪೊನ್ನಣ್ಣ ಸ್ವಾಗತಿಸಿದರು. ಇಪಿಸಿ ಘಟಕದ ಶಿವಕುಮಾರ್ ವಂದಿಸಿದರು.

ಹಿರಿಯರ ಆರೋಗ್ಯಯತ್ತ ಗಮನ ನೀಡಲು ಸಲಹೆ

ಹಿರಿಯ ನಾಗರಿಕರ ಹುಟ್ಟುಹಬ್ಬ ಆಚರಿಸುವದಕ್ಕೆ ಇರುವ ಉತ್ಸಾಹ, ವರ್ಷಕ್ಕೊಮ್ಮೆ ಅವರ ಆರೋಗ್ಯ ತಪಾಸಣೆಗೂ ಕುಟುಂಬ ವರ್ಗದ ಆದ್ಯತೆಯಾಗಬೇಕೆಂದು ಭಾರತೀಯ ವೈದ್ಯಕೀಯ ಸಂಘದ ಹಿರಿಯ ಉಪಾಧ್ಯಕ್ಷ ಡಾ. ಜಿ.ಕೆ. ಭಟ್ ಕರೆ ನೀಡಿದರು.

ನಗರದ ಅಮೃತಾ ಇಎನ್‍ಟಿ ಕ್ಲಿನಿಕ್ ಹಾಗೂ ಕಾವೇರಿ ಹಿಯರಿಂಗ್ ಕ್ಲಿನಿಕ್ ವತಿಯಿಂದ ಆಯೋಜಿಸಿದ್ದ ವಿಶ್ವ ಶ್ರವಣ ದಿನಾಚರಣೆ ಅಂಗವಾಗಿನ ಶ್ರವಣ ಉಚಿತ ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಜಿ.ಕೆ. ಭಟ್, ಮಕ್ಕಳ ಹುಟ್ಟುಹಬ್ಬವನ್ನು 10 ವರ್ಷದವರೆಗೆ ಆಚರಿಸುವುದು ಚಂದ. ಅಂತೆಯೇ ಹಿರಿಯರ ಹುಟ್ಟು ಹಬ್ಬ ಆಚರಿಸುವುದಕ್ಕಿಂತ ಅವರ ಆರೋಗ್ಯ ತಪಾಸಣೆಯನ್ನು ಕೈಗೊಳ್ಳುವ ಮೂಲಕ ಅವರ ಜೀವನವನ್ನು ಮತ್ತಷ್ಟು ದೀರ್ಘ ಕಾಲದವರೆಗೆ ಕೊಂಡೊಯ್ಯಬಹುದು ಎಂದರು.

ಹಿರಿಯ ನಾಗರಿಕರ ಆರೋಗ್ಯವನ್ನು ಆಗಿಂದಾಗ್ಗೆ ಪರೀಕ್ಷಿಸುವುದು ಅವರ ಕುಟುಂಬ ವರ್ಗದವರ ಹೊಣೆಗಾರಿಕೆಯೂ ಆಗಿದೆ ಎಂದು ಅವರು ಹೇಳಿದರು. ಮಡಿಕೇರಿ ವಿಭಾಗದ ಡಿವೈಎಸ್ಪಿ ಬಾರಿಕೆ ದಿನೇಶ್ ಕುಮಾರ್ ಮಾತನಾಡಿ, ಮಡಿಕೇರಿ ದಸರಾ ಸೇರಿದಂತೆ ಹಲವು ಸಂದರ್ಭಗಳಲ್ಲಿ ಅಳವಡಿಸುವ ಡಿಜೆ ಸಂಗೀತದಿಂದ ಶ್ರವಣಕ್ಕೆ ಭಾರೀ ಹಾನಿಯುಂಟಾಗುತ್ತದೆ. ಹಲವಾರು ಬಾರಿ ಎಚ್ಚರಿಸಿದರೂ ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಪಟಾಕಿ ಸಿಡಿತದಿಂದಲೂ ಶ್ರವಣ ಸಮಸ್ಯೆ ಕಂಡುಬರುತ್ತಿದೆ ಎಂದರು. ಪೊಲೀಸ್ ಇಲಾಖೆ ಸದಾ ಕರ್ತವ್ಯ ನಿರತ ವೈದ್ಯರ ಪರವಾಗಿ ಇರುತ್ತದೆ ಎಂದು ದಿನೇಶ್ ಕುಮಾರ್ ಭರವಸೆ ನೀಡಿದರು.

ಪ್ರಜಾಸತ್ಯ ಪತ್ರಿಕೆ ಸಂಪಾದಕ ಡಾ. ಬಿ.ಸಿ. ನವೀನ್ ಮಾತನಾಡಿ, ಪ್ರತೀ ಸಾವಿರ ಮಕ್ಕಳಲ್ಲಿ 4 ಮಕ್ಕಳಿಗೆ ಶ್ರವಣ ಸಮಸ್ಯೆ ಕಂಡುಬರುತ್ತಿದೆ. ದೇಶದಲ್ಲಿ ಶೇ. 40 ರಷ್ಟು ಹಿರಿಯ ನಾಗರಿಕರಿಗೆ ಶ್ರವಣ ಸಮಸ್ಯೆಯಿದೆ. ಈ ಪೈಕಿ ಶೇ. 20 ರಷ್ಟು ಮಂದಿಯ ಕಿವುಡುತನ ಸರಿಪಡಿಸಬಹುದಾಗಿದೆ ಎಂದರು. ಭಾರತೀಯ ವೈದ್ಯಕೀಯ ಸಂಘದ ಕೊಡಗು ಜಿಲ್ಲಾಧ್ಯಕ್ಷ ಡಾ. ಶ್ಯಾಮ್ ಅಪ್ಪಣ್ಣ ಮಾತನಾಡಿ, ಕಿವುಡುತನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯಕ್ರಮಗಳು ಎಲ್ಲೆಡೆ ಆಯೋಜಿಸುವಂತಾಗಬೇಕೆಂದರಲ್ಲದೇ, ನಾಪೋಕ್ಲುವಿನಲ್ಲಿ ಇತ್ತೀಚಿಗೆ ವೈದ್ಯರೋರ್ವರ ಮೇಲೆ ಹಲ್ಲೆ ನಡೆದಾಗ ಪೊಲೀಸರು ಕೂಡಲೇ ವೈದ್ಯರ ನೆರವಿಗೆ ಬಂದರು ಎಂದು ಶ್ಲಾಘಿಸಿದರು. ವೈದ್ಯರೊಂದಿಗೆ ಜನತೆ ತಾಳ್ಮೆಯಿಂದ ವರ್ತಿಸುವಂತೆಯೂ ಶ್ಯಾಮ್ ಅಪ್ಪಣ್ಣ ಮನವಿ ಮಾಡಿದರು.

ಕಾರ್ಯಕ್ರಮದ ಆಯೋಜಕ ಅಮೃತಾ ಕ್ಲಿನಿಕ್‍ನ ಡಾ. ಮೋಹನ್ ಅಪ್ಪಾಜಿ ಮಾತನಾಡಿ, ವಿಶ್ವದಲ್ಲಿ 311 ಮಿಲಿಯನ್ ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದು ಭಾರತದಲ್ಲಿ 61 ಮಿಲಿಯನ್ ಮಂದಿಗೆ ಶ್ರವಣ ಸಮಸ್ಯೆಯಿದೆ. ಬೇರೆ ರಾಜ್ಯಗಳಲ್ಲಿ ಶ್ರವಣ ಸಮಸ್ಯೆ ನಿವಾರಣೆಯ ಉಪಕರಣಕ್ಕೆ ರಾಜ್ಯ ಸರ್ಕಾರದ ಸಹಾಯಧನ ದೊರಕುತ್ತಿದ್ದು ಕರ್ನಾಟಕ ರಾಜ್ಯವೂ ಈ ನಿಟ್ಟಿನಲ್ಲಿ ಅನುದಾನ ನೀಡಿಕೆಗೆ ಮುಂದಾಗಬೇಕೆಂದು ಡಾ. ಮೋಹನ್ ಅಪ್ಪಾಜಿ ಕೋರಿದರು.

ರೋಟರಿ ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ. ಮಾತನಾಡಿ, ವಿಶ್ವದಲ್ಲಿ 34 ಮಿಲಿಯನ್ ಮಕ್ಕಳು ಶ್ರವಣ ದೋಷದಿಂದ ಬಳಲುತ್ತಿದ್ದಾರೆ. ಕೊಡಗಿನಲ್ಲಿ ಶ್ರವಣ ದೋಷ ನಿವಾರಣೆಯ ಕಾರ್ಯಯೋಜನೆಗಳು ಮತ್ತಷ್ಟು ಹೆಚ್ಚಾಗಬೇಕೆಂದು ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಮಾತನಾಡಿ, ಶ್ರವಣ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಅಗತ್ಯ ಉಪಕರಣಗಳನ್ನು ಜಿಲ್ಲಾಸ್ಪತ್ರೆ ಹೊಂದಿದೆ ಎಂದರು.

ಹಿರಿಯ ವೈದ್ಯ ಡಾ. ಸಿ.ಎಂ. ದೇವಯ್ಯ, ಭಾರತೀಯ ವಿದ್ಯಾಭವನದ ಕೊಡಗು ಘಟಕದ ಅಧ್ಯಕ್ಷ ಕೆ.ಎಸ್. ದೇವಯ್ಯ, ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಗದೀಶ್ ಪ್ರಶಾಂತ್, ಇನ್ನರ್ ವೀಲ್ ಅಧ್ಯಕ್ಷೆ ನಿಶಾ ಮೋಹನ್ ಮಾತನಾಡಿದರು. ಚಂದ್ರಶೇಖರ್ ಪ್ರಾರ್ಥಿಸಿ, ಡಾ. ಎಂ.ಎ. ಅಚ್ಚಯ್ಯ ನಿರೂಪಿಸಿದರು. ಹಲವಾರು ಸಂಘ-ಸಂಸ್ಥೆಗಳ ಪ್ರಮುಖರು, ವೈದ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಯ ಹಲವೆಡೆಗಳಿಂದ ಶ್ರವಣ ಸಮಸ್ಯೆಯಿರುವವರು ಉಚಿತ ಶಿಬಿರದ ಪ್ರಯೋಜನ ಪಡೆದರು.

ಜಾಥಾಗೆ ಚಾಲನೆ

ವಿಶ್ವ ಶ್ರವಣ ದಿನ ಕಾರ್ಯಕ್ರಮದ ಅಂಗವಾಗಿ ನಗರದ ಕೋಟೆ ಆವರಣದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಚಾಲನೆ ನೀಡಿದರು.

ಜೀವನಕ್ಕಾಗಿ ಶ್ರವಣ: ಶ್ರವಣ ದೋಷವು ಮಿತಿಗೊಳಿಸಲು ಬಿಡಬೇಡಿ ಎಂಬ ಘೋಷ ವಾಕ್ಯದೊಂದಿಗೆ ವಿದ್ಯಾರ್ಥಿಗಳು ನಗರದ ಕೋಟೆ ಆವರಣದಿಂದ ಜಿಲ್ಲಾಸ್ಪತ್ರೆಯವರೆಗೆ ಜಾಥಾ ನಡೆಸಿದರು.

ಜಾಥಾ ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಕಾರ್ಯಪ್ಪ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಆನಂದ್, ವೈದ್ಯಕೀಯ ಅಧೀಕ್ಷಕ ಲೋಕೇಶ್, ಇಎನ್‍ಟಿ ವಿಭಾಗದ ಮುಖ್ಯಸ್ಥೆ ಡಾ. ಶ್ವೇತಾ, ಜಿಲ್ಲಾ ವಿಶೇಷಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣಾ ಇಲಾಖೆಯ ಅಧಿಕಾರಿ ಸಂಪತ್ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ಸೇರಿದಂತೆ ಇತರರು ಇದ್ದರು.