ಶ್ರೀಮಂಗಲ, ಮಾ. 6: ರಾಜೀವ್‍ಗಾಂಧಿ ವಸತಿ ನಿಗಮ ನಿಯಮಿತ ವಸತಿ ಇಲಾಖೆಯ ವತಿಯಿಂದ ಬಸವ ವಸತಿಯೋಜನೆ ಸೇರಿದಂತೆ. ವಿವಿಧ ಯೋಜನೆಯಡಿ ವಸತಿ ರಹಿತರಿಗೆ ಮನೆ ಕಟ್ಟಲು ಧನ ಸಹಾಯ ನೀಡುವ ಸೌಲಭ್ಯಕ್ಕೆ ಆಯ್ಕೆಯಾಗಿದ್ದ ಫಲಾನುಭವಿಗಳ ರದ್ದುಪಡಿಸಲಾಗಿದ್ದ ಮನೆಗಳ ಯೋಜನೆಯನ್ನು ಪುನಃ ತೆರವುಗೊಳಿಸಿ ತಿಳುವಳಿಕೆ ಪತ್ರವನ್ನು ತಾಲೂಕು ಪಂಚಾಯಿತಿ ವತಿಯಿಂದ ವಿತರಿಸಲಾಯಿತು.

ಹಲವು ಫಲಾನುಭವಿಗಳು ವಸತಿಯೋಜನೆಯಡಿ 2017-18ರ ಸಾಲಿನಲ್ಲಿ ಆಯ್ಕೆಗೊಂಡಿದ್ದರೂ ನಿಗದಿತ ಸಮಯದೊಳಗೆ ಮನೆಯನ್ನು ಪ್ರಾರಂಭಿಸದ ಕಾರಣದಿಂದ ರದ್ದುಪಡಿಸಲಾಗಿದ್ದ ಮನೆಯನ್ನು ಪುನಃ ತೆರವುಗೊಳಿಸಿ ಮನೆ ನಿರ್ಮಾಣಕ್ಕೆ ಸರಕಾರ ಅವಕಾಶ ಮಾಡಿಕೊಟ್ಟಿದ್ದು, ಇದರ ಪ್ರಯೋಜನವನ್ನು ಪಡೆದು ಕೊಳ್ಳುವಂತೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಫಲಾನುಭವಿಗಳಿಗೆ ಸಲಹೆ ನೀಡಿದರು.

ತಾಲೂಕು ಪಂಚಾಯಿತಿಯ ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ತಿಳುವಳಿಕೆ ಪತ್ರ ವಿತರಿಸಿ ಮಾತನಾಡಿದ ಅವರು ವೀರಾಜಪೇಟೆ ಕ್ಷೇತ್ರದ ಶಾಸಕರಿಗೆ ಮನವಿ ಮಾಡಿಕೊಂಡ ಮೇರೆಗೆ ಅವರು ವಸತಿ ಸಚಿವ ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ಹಿನ್ನೆಲೆ ಸರಕಾರವು ರದ್ದುಪಡಿಸಲಾಗಿದ್ದ ಮನೆ ಕಟ್ಟುವ ಯೋಜನೆಯನ್ನು ಪುನಃ ತೆರವುಗೊಳಿಸಿ ಅವಕಾಶ ಮಾಡಿಕೊಟ್ಟಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳದಿದ್ದಲ್ಲಿ ಇನ್ನು 15 ವರ್ಷಗಳವರಗೆ ಸರಕಾರದ ಯಾವುದೇ ವಸತಿಯೋಜನೆಯ ಫಲಾನುಭವಿಗಳಾಗಲು ಅವಕಾಶವಿರುವುದಿಲ್ಲ ಎಂದು ಹೇಳಿದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲೀರ ಚಲನ್ ಮಾತನಾಡಿ, ಪ್ರಧಾನ ಮಂತ್ರಿಯ ಕನಸಿನಂತೆ ಸೂರಿಲ್ಲದೆ ಯಾರು ಇರಬಾರದೆಂಬ ಹಿನ್ನೆಲೆಯಲ್ಲಿ ರೂಪಿಸಿರುವ ಬಸವ ವಸತಿ ಸೇರಿದಂತೆ ವಿವಿಧಯೋಜನೆಯ ಮನೆ ನಿರ್ಮಾಣಕ್ಕೆ ಮತ್ತೇ ಅವಕಾಶ ಸಿಕ್ಕಿದ್ದು ತಕ್ಷಣ ಅಡಿಪಾಯ ನಿರ್ಮಿಸಿ ಮಾತನಾಡಿದ ಅವರು ವೀರಾಜಪೇಟೆ ಕ್ಷೇತ್ರದ ಶಾಸಕರಿಗೆ ಮನವಿ ಮಾಡಿಕೊಂಡ ಮೇರೆಗೆ ಅವರು ವಸತಿ ಸಚಿವ ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ಹಿನ್ನೆಲೆ ಸರಕಾರವು ರದ್ದುಪಡಿಸಲಾಗಿದ್ದ ಮನೆ ಕಟ್ಟುವ ಯೋಜನೆಯನ್ನು ಪುನಃ ತೆರವುಗೊಳಿಸಿ ಅವಕಾಶ ಮಾಡಿಕೊಟ್ಟಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳದಿದ್ದಲ್ಲಿ ಇನ್ನು 15 ವರ್ಷಗಳವರಗೆ ಸರಕಾರದ ಯಾವುದೇ ವಸತಿಯೋಜನೆಯ ಫಲಾನುಭವಿಗಳಾಗಲು ಅವಕಾಶವಿರುವುದಿಲ್ಲ ಎಂದು ಹೇಳಿದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲೀರ ಚಲನ್ ಮಾತನಾಡಿ, ಪ್ರಧಾನ ಮಂತ್ರಿಯ ಕನಸಿನಂತೆ ಸೂರಿಲ್ಲದೆ ಯಾರು ಇರಬಾರದೆಂಬ ಹಿನ್ನೆಲೆಯಲ್ಲಿ ರೂಪಿಸಿರುವ ಬಸವ ವಸತಿ ಸೇರಿದಂತೆ ವಿವಿಧಯೋಜನೆಯ ಮನೆ ನಿರ್ಮಾಣಕ್ಕೆ ಮತ್ತೇ ಅವಕಾಶ ಸಿಕ್ಕಿದ್ದು ತಕ್ಷಣ ಅಡಿಪಾಯ ನಿರ್ಮಿಸಿ ನೀಡಲಾಯಿತಾದರೂ 60 ಜನ ಮಾತ್ರ ಮನೆ ನಿರ್ಮಿಸಿದ್ದರು. ಉಳಿದಂತೆ 501 ಫಲಾನುಭವಿಗಳ ರದ್ದು ಪಡಿಸಲಾಗಿದ್ದ ಮನೆಗಳನ್ನು ತೆರವುಗೊಳಿಸಿ ಪುನರ್ ನಿರ್ಮಾಣಕ್ಕೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಚಲನ್ ಕುಮಾರ್ ಹಾಗೂ ಶಾಸಕ ಕೆ.ಜಿ. ಬೋಪಯ್ಯಅವರ ಪ್ರಯತ್ನದಿಂದ ಮತ್ತೆ ಅವಕಾಶ ಸಿಕ್ಕಿದ್ದು ಈ ಬಾರಿ ಸದುಪಯೋಗ ಪಡಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ಮತ್ತೊಂದು ಸರಕಾರದಿಂದ ಧನ ಸಹಾಯ ಸಿಗುವುದಿಲ್ಲ ಎಂದು ಮಾಹಿತಿ ನೀಡಿದರು.

ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಷಣ್ಮುಗಂ ಮಾತನಾಡಿ, ಪ್ರತೀ ಹಂತದಲ್ಲೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಮಾಹಿತಿ ಪಡೆದು ಮನೆ ನಿರ್ಮಿಸಿಕೊಳ್ಳಿ. ಜನಪ್ರತಿನಿಧಿಗಳ ಪ್ರಯತ್ನ ಹಾಗೂ ಸರಕಾರದ ಸೌಲಭ್ಯ ವ್ಯರ್ಥವಾಗಲು ಬಿಡದೆ ತಕ್ಷಣ ಮನೆ ನಿರ್ಮಿಸಿ ಎಂದು ಫಲಾನುಭವಿಗಳಿಗೆ ತಿಳಿಸಿದರು.

ಈ ಸಂದರ್ಭ ತಾಲೂಕಿನ ಎಲ್ಲಾ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಹಲವು ಫಲಾನುಭವಿಗಳು ಭಾಗವಹಿಸಿ ತಿಳುವಳಿಕೆ ಪತ್ರ ಪಡೆದುಕೊಂಡರು.