ಸಿದ್ದಾಪುರ, ಮಾ. 6: ಕೆಲಸದ ವಿಚಾರದಲ್ಲಿ ಯುವಕರ ನಡುವೆ ನಡೆದ ಹೊಡೆದಾಟದಲ್ಲಿ ಒರ್ವ ವ್ಯಕ್ತಿ ಗಾಯಗೊಂಡ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ. ನೆಲ್ಯಹುದಿಕೇರಿ ನಿವಾಸಿ ಮಧು ಹಾಗೂ ನಲ್ವತೆಕ್ರೆ ನಿವಾಸಿ ಅಪ್ಪು ಹಾಗೂ ಆತನ ಸಹಚರರು ಮದು ಎಂಬಾತನ ಮೇಲೆ ಕೆಲಸದ ವಿಚಾರದಲ್ಲಿ ತಗಾದೆ ತೆಗೆದು ಮಾತುಕತೆ ತಾರಾಕಕ್ಕೇರಿದೆ. ಈ ಸಂದÀರ್ಭದಲ್ಲಿ ಅಪ್ಪು ಮತ್ತು ಆತನ ಸ್ನೇಹಿತರು ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಮಧು ಸಿದ್ದಾಪುರ ಪೊಲೀಸ್ ಠಾಣೆಗೆ ಪುಕಾರು ನೀಡಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಅಪ್ಪು ಮತ್ತು ಸ್ನೇಹಿತರ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.