ಮಡಿಕೇರಿ, ಮಾ. 6: ಬಾಳೆಲೆ ಸಮೀಪದ ದೇವನೂರು ಗ್ರಾಮದ ಬೆಳೆಗಾರರೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಗೊತ್ತಾಗಿದೆ. ದೇವನೂರು ಗ್ರಾಮದ ಪಿ. ನಂಜಪ್ಪ (60) ಅವರು ತಮ್ಮ ಕಾಫಿ ತೋಟದ ನಿರ್ವಹಣೆಯು ಸಾಧ್ಯವಾಗದಿರುವ ಕುರಿತು ತೀವ್ರ ಬೇಸರಗೊಂಡು, ಸಾವಿಗೆ ಶರಣಾಗಿರು ವರೆಂದು ಮೂಲಗಳು ತಿಳಿಸಿವೆ. ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆಯೊಂದಿಗೆ ಕಾನೂನು ಕ್ರಮಕೈಗೊಳ್ಳಲಾಗಿದೆ.