ಅಭಿವೃದ್ಧಿಗೆ ಪೂರಕ ಬಜೆಟ್ -ಕೆಜಿಬಿ ರಾಜ್ಯ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇಲಾಖಾವಾರು ಬದಲಾಗಿ ವಲಯವಾರು ಸವಲತ್ತುಗಳನ್ನು ಘೋಷಿಸಿರುವುದು ಸ್ವಾಗತಾರ್ಹವಾಗಿದ್ದು, ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸಲ್ಪಟ್ಟಿದೆ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಿಸಿದ್ದಾರೆ. ಜನಪರ ಬಜೆಟ್ - ರಂಜನ್
ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜನಪರ ಬಜೆಟ್ ಮಂಡಿಸುವ ಮೂಲಕ ಸಮಾಜದ ಹಿತಕ್ಕಾಗಿ ಮತ್ತು ಸುಖಕ್ಕಾಗಿ ಎಲ್ಲ ವರ್ಗದ ಜನತೆಯನ್ನು ಗಮನದಲ್ಲಿ ಇರಿಸಿಕೊಂಡು ಆರ್ಥಿಕ ಸೌಲಭ್ಯ ಕಲ್ಪಿಸಿದ್ದಾರೆ. ಕಾಫಿ ಬೆಳೆಗಾರರಿಗೆ ಅನುಕೂಲವಾಗುವಂತೆ 10 ಹೆಚ್‍ಪಿ ವಿದ್ಯುತ್ ವಿಚಾರ ಸಂಬಂಧ ಸಿಎಂ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಹರ್ಷ ವ್ಯಕ್ತಪಡಿಸಿದ್ದಾರೆ.ಉತ್ತಮ ಬಜೆಟ್ - ಸುನಿಲ್ಆರ್ಥಿಕ ಪರಿಸ್ಥಿತಿ ಕ್ಲಿಷ್ಟಕರವಾಗಿರುವ ಸನ್ನಿವೇಶ ದಲ್ಲೂ ಮುಖ್ಯಮಂತ್ರಿಗಳು ರೈತರ ಪರವಾದ ಉತ್ತಮ ಬಜೆಟ್‍ನ್ನು ಮಂಡಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹೇಳಿದ್ದಾರೆ.
ಕೊಡಗು ಸಂಪೂರ್ಣ ನಿರ್ಲಕ್ಷ್ಯ : ವೀಣಾ
ಮುಖ್ಯಮಂತ್ರಿಗಳು ಬಜೆಟ್‍ನಲ್ಲಿ ಕೊಡಗನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದು ಸ್ಪಷ್ಟವಾಗಿದೆ ಎಂದು ಎಂ.ಎಲ್.ಸಿ. ವೀಣಾ ಅಚ್ಚಯ್ಯ ಹೇಳಿದ್ದಾರೆ. ಜಿಲ್ಲೆಯ ಬೆಳೆಗಾರರು, ರೈತರು, ಸಂಘ-ಸಂಸ್ಥೆಗಳು ವಿವಿಧ ಬೇಡಿಕೆಗಳ ಬಗ್ಗೆ ಗಮನಕ್ಕೆ ತಂದಿದ್ದರು. ಜಿಲ್ಲೆ ಸತತವಾಗಿ ಎರಡು ವರ್ಷ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಜನತೆಯ ಸಂಕಷ್ಟ ಇನ್ನು ಮುಗಿದಿಲ್ಲ. ಯಾವುದೇ ವಿಶೇಷ ಪ್ಯಾಕೇಜ್‍ಗಳಾಗಲಿ, ಯೋಜನೆಗಳನ್ನಾಗಲಿ ಪ್ರಕಟಿಸಿಲ್ಲ ಎಂದು ಅವರು ವಿಷಾದಿಸಿದ್ದಾರೆ. ಕಾಫಿ ಬೆಳೆಗಾರರು ಹಾಗೂ ಕಬ್ಬು ಬೆಳೆಗಾರರ 10 ಹೆಚ್‍ಪಿ ವಿದ್ಯುತ್ ವಿಚಾರವನ್ನು ಪ್ರಸ್ತಾಪಿಸಲಾಗಿದೆಯಾದರೂ, ಇದರಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಜಿಲ್ಲೆಗೆ ಸಚಿವ ಸ್ಥಾನವನ್ನು ನೀಡದೆ ಕಡೆಗಣಿಸಿರುವ ಸರಕಾರ ಬಜೆಟ್‍ನಲ್ಲೂ ನಿರ್ಲಕ್ಷ್ಯ ಧೋರಣೆಯನ್ನೇ ಮುಂದುವರಿಸಿದಂತಾಗಿದೆ ಎಂದು ಅವರು ಟೀಕಿಸಿದ್ದಾರೆ.