ಮಡಿಕೇರಿ, ಮಾ. 6 : ವಿಮಲ್ಸ್ ಕ್ರಿಕೆಟ್ ಕ್ಲಬ್ ಮತ್ತು ವೆಸ್ಟ್‍ರ್ನ್ ಕ್ರಿಕೆಟರ್ಸ್ ವತಿಯಿಂದ ತಾ.21 ರಂದು ಐಪಿಎಲ್ ಮಾದರಿಯಲ್ಲಿ ಕೂರ್ಗ್ ಕ್ರಿಕೆಟ್ ಲೀಗ್ 2020 ಲೆದರ್ ಬಾಲ್ ಪಂದ್ಯಾಟವು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಪಂದ್ಯಾವಳಿಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಕೆ.ಮನ್ಸೂರ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಮಲ್ಸ್ ಕ್ರಿಕೆಟ್ ಕ್ಲಬ್ ನ ಅಧ್ಯಕ್ಷ ಎಂ.ಆರ್.ಶಮೀನ್ ಅಧ್ಯಕ್ಷತೆಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಮೊದಲು ಬರುವ ಆರು ತಂಡಗಳಿಗೆ ಮಾತ್ರ ಅವಕಾಶವಿರುತ್ತದೆ. ಆಸಕ್ತ ತಂಡಗಳು ನಗರದ ಚೌಕಿ ಬಳಿಯ ಸ್ಪೋಟ್ರ್ಸ್ ವಾರ್ಡ್, ಜಿಲ್ಲಾ ಕ್ರೀಡಾಂಗಣ ಬಳಿಯ ರಮೇಶ್ ಬೇಕರಿ, ಎ.ವಿ ಶಾಲೆ ಬಳಿಯ ಕಾಫಿಪೌಂಟ್ ಮತ್ತು ಮಾರುಕಟ್ಟೆ ಬಳಿಯ ಹೊರೈನ್ ಬೇಕರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ತಾ.9 ಕೊನೆಯ ದಿನವಾಗಿದ್ದು, ಆಧಾರ್ ಕಾರ್ಡ್ ಕಡ್ಡಾಯವಾಗಿ ಲಗತ್ತಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ಸಾಜಿದ್- 9663973704, ಕಬೀರ್- 9980001947, ಮನ್ಸೂರ್ - 9449990147ನ್ನು ಸಂಪರ್ಕಿಸಬಹುದಾಗಿದೆ. ವಿಜೇತ ತಂಡಕ್ಕೆ ರೂ.70ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ.35ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ಮನ್ಸೂರ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಸಮಿತಿಯ ಅಧ್ಯಕ್ಷ ಎಂ.ಆರ್.ಶಮೀನ್, ಉಪಾಧ್ಯಕ್ಷ ಎಂ.ಹೆಚ್.ಕಬೀರ್, ಖಜಾಂಚಿ ಅಬ್ದುಲ್ ಸಜೀದ್ ಹಾಗೂ ಸುಮೇಶ್ ಉಪಸ್ಥಿತರಿದ್ದರು.