ವೀರಾಜಪೇಟೆ, ಮಾ. 3: ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನ ರಾಜಭವನದಲ್ಲಿ ಇತ್ತೀಚೆಗೆ ನಡೆಯಿತು.
ರಾಜ್ಯಪಾಲ ವಜುಭಾಯಿ ವಾಲ ಅವರು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜಿಲ್ಲಾವಾರು ಪ್ರಶಸ್ತಿ ಪ್ರದಾನÀ ಮಾಡಿದರು. ಈ ಸಂದರ್ಭದಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯ ಪ್ರಧಾನ ಆಯುಕ್ತ ಪಿ.ಜಿ. ಆರ್ ಸಿಂಧ್ಯಾ, ಒಡಿಶಾದ ರಾಜ್ಯ ಮುಖ್ಯ ಆಯುಕ್ತ ಮಿಶ್ರ, ಸ್ಕೌಟ್ಸ್ ಆಯುಕ್ತ ಖಾಲಿದ್, ರಾಜ್ಯ ಉಪಾಧ್ಯಕ್ಷ ಷಣ್ಮುಗಪ್ಪ ಉಪಸ್ಥಿತರಿದ್ದರು.
ಕೊಡಗು ಜಿಲ್ಲೆಯ 7 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೀರಾಜಪೇಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಅಲ್ಲಂಗಡ ತಮ್ಮಯ್ಯ ರೋವರ್ ವಿಭಾಗದಿಂದ ಪ್ರಶಸ್ತಿ ಪಡೆದರೆ, ಎಸ್.ಎಂ.ಎಸ್. ಶಾಲೆಯ ಗೈಡ್ಸ್ ವಿದ್ಯಾರ್ಥಿಗಳಾದ ಕೆ. ಆರುಶಿ ಅಯ್ಯಪ್ಪ, ಪಿ.ಆರ್. ಲಕ್ಷಾ, ಎಂ.ಪಿ. ಧರೇನಾ, ಐ.ಎ. ದಿಷಾ, ಎನ್.ಎ. ಶ್ರಾವ್ಯ, ಎಂ.ಎಸ್. ವಿಕ್ಷೀತಾ, ವಿ. ವಂಶಿಕ ಗೈಡ್ಸ್ ವಿಭಾಗದಿಂದ ಪ್ರಶಸ್ತಿ ಪಡೆದರು.
ಈ ಸಂದರ್ಭ ರೋವರ್ ಲೀಡರ್ ಮಂದೆಯಂಡ ವನಿತ್ ಕುಮಾರ್, ಎ.ಎಲ್.ಟಿ. ಗೈಡ್ ಕ್ಯಾಪ್ಟನ್ ಮೈಥಲಿರಾವ್ ಉಪಸ್ಥಿತರಿದ್ದರು.