ಸೋಮವಾರಪೇಟೆ, ಮಾ. 3: ವಿದ್ಯಾರ್ಥಿಗಳು ಸಣ್ಣ ಪ್ರಾಯದಿಂದಲೇ ಸಂಸ್ಕøತಿ, ಸಂಸ್ಕಾರವಂತರಾಗಿ ರೂಪುಗೊಳ್ಳಲು ವಿದ್ಯಾಸಂಸ್ಥೆಗಳ ಕೊಡುಗೆ ಅಪಾರ ಎಂದು ಎಂಬೆಸ್ಸಿ ಸಂಸ್ಥೆಯ ಉಪಾಧ್ಯಕ್ಷ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅಭಿಪ್ರಾಯಿಸಿದರು.
ಸಮೀಪದ ಶಾಂತಳ್ಳಿ-ಬೆಟ್ಟದಳ್ಳಿಯಲ್ಲಿರುವ ಶ್ರೀಕುಮಾರ ಲಿಂಗೇಶ್ವರ ಪ್ರೌಢಶಾಲೆ ಮತ್ತು ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಯಲ್ಲಿ ಆಯೋಜಿಸಿದ್ದ ಪೋಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಂತಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶ್ರೀಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ಕಾರ್ಯ ಶ್ಲಾಘನೀಯ. ಇದರೊಂದಿಗೆ ಸ್ಥಳೀಯವಾಗಿ ಆಂಗ್ಲಮಾಧ್ಯಮ ಶಿಕ್ಷಣವನ್ನು ಒದಗಿಸುತ್ತಿರುವ ಸಂಸ್ಥೆ ಯೊಂದಿಗೆ ಪೋಷಕರು ಕೈಜೋಡಿಸ ಬೇಕು. ಮಕ್ಕಳು ವಿದ್ಯಾವಂತರಾದರಷ್ಟೇ ಸಾಲದು; ಸಂಸ್ಕಾರವಂತರಾಗಿಯೂ ರೂಪುಗೊಳ್ಳಬೇಕು ಎಂದು ರವೀಂದ್ರ ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಕೆ. ಗೋಪಾಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮ ದೊಂದಿಗೆ ಆಂಗ್ಲಮಾಧ್ಯಮ ಶಿಕ್ಷಣವೂ ವಿದ್ಯಾರ್ಥಿಗಳಿಗೆ ಲಭಿಸಬೇಕು ಎಂಬ ನಿಟ್ಟಿನಲ್ಲಿ ಸ್ಥಳೀಯ ವಿದ್ಯಾಪ್ರೇಮಿಗಳ ಸಹಕಾರದಿಂದ ಶ್ರೀಕುಮಾರ ಲಿಂಗೇಶ್ವರ ಆಂಗ್ಲಮಾಧ್ಯಮ ಶಾಲೆಯನ್ನು ತೆರೆಯಲಾಗಿದೆ. ಶಾಲೆಯ ಬೆಳವಣಿಗೆಗೆ ದಾನಿಗಳು ಹೆಚ್ಚಿನ ಕಾಳಜಿ ವಹಿಸುತ್ತಿ ದ್ದಾರೆ. ಸುತ್ತಮುತ್ತಲ ಪೋಷಕರೂ ಸಹ ಶಾಲೆಯ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದರು.
ಇದೇ ಸಂದರ್ಭ ರೂ. 35 ಸಾವಿರ ಮೌಲ್ಯದ ಕಂಪ್ಯೂಟರ್ನ್ನು ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಗೆ ಕೊಡುಗೆಯಾಗಿ ನೀಡಿದ ಹರಪಳ್ಳಿ ರವೀಂದ್ರ ಹಾಗೂ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದ ವೆಂಕಟೇಶ್ ಅವರುಗಳನ್ನು ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಪೋಷಕರ ದಿನಾಚರಣೆ ಹಿನ್ನೆಲೆ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಭಾತ್ಮೀದಾರ ಸಂಪತ್ಕುಮಾರ್, ಖಜಾಂಚಿ ವೀರಪ್ಪ, ಕಾರ್ಯದರ್ಶಿ ಕಾರ್ಯಪ್ಪ, ಸಮಿತಿ ಸದಸ್ಯರುಗಳಾದ ಸವಿತ, ಉತ್ತಯ್ಯ, ಸುಬ್ಬಯ್ಯ, ಶಾಂತಳ್ಳಿ ವಿಎಸ್ಎಸ್ಎನ್ ನಿರ್ದೇಶಕ ರಾಜೇಶ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಬಿ.ಟಿ. ರತ್ನಾವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.