ಕುಶಾಲನಗರ, ಮಾ. 3: ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ವತಿಯಿಂದ ಕನ್ನಡ ಸಾಹಿತ್ಯ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕÀ ಡಾ. ಮಹಾಂತೇಶ್ ಪಾಟೇಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕನ್ನಡ ಭಾಷೆಯ ಬೆಳವಣಿಗೆ ಯುವ ಪೀಳಿಗೆಯ ಜವಾಬ್ದಾರಿಯಾಗಿದೆ. ಕೀಳರಿಮೆ ಬಿಟ್ಟು ನಾಡಿನ ಭಾಷೆಯನ್ನು ಬಳಕೆ ಮಾಡಬೇಕಿದೆ ಎಂದರು. ಕಾಲೇಜು ಪ್ರಾಂಶುಪಾಲ ಪ್ರೊ. ಹೆಚ್.ಬಿ. ಲಿಂಗಮೂರ್ತಿ ಮಾತನಾಡಿ, ಕನ್ನಡವನ್ನು ಐಚ್ಛಿಕವಾಗಿ ಕಲಿತ ವಿದ್ಯಾರ್ಥಿಗಳು ದೇಶದ ಯಾವುದೇ ರಾಜ್ಯಗಳಲ್ಲಿ ಉದ್ಯೋಗ ಪಡೆಯಬಹುದೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಮಿತಿ ಸಂಚಾಲಕ ಡಾ. ಬಿ.ಡಿ. ಹರ್ಷ, ಐ.ಕ್ಯೂ.ಎ.ಸಿ. ಘಟಕದ ಸಂಚಾಲಕಿ ಡಾ. ಎಂ. ರಶ್ಮಿ, ಕನ್ನಡ ಉಪನ್ಯಾಸಕರುಗಳಾದ ಅನಿತ, ಸೋಮಕ್ಕ ಪ್ರಮೋದ್, ನಂಜುಂಡಸ್ವಾಮಿ, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.