ಮಡಿಕೇರಿ, ಮಾ. 3: ನಾವು ತಾಳ್ಮೆ ಮತ್ತು ವಿನಯದಿಂದ ಜೀವನ ನಡೆಸಬೇಕು. ನಮ್ಮಲ್ಲಿ ನಾನು ಎಂಬ ಅಹಂ ಇರಬಾರದು, ಆತ್ಮ ಶುದ್ಧಿಯಾಗಿರಬೇಕು ಆದಾಗ ಮಾತ್ರ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ವಾಗ್ಮಿ ಯು.ಕೆ. ಹನೀಫ್ ನಿಝಾಮಿ ಮೊಗ್ರಾಲ್ ಕಾಸರಗೋಡು ಹೇಳಿದರು.
ಪೇರಡ್ಕ ವಲಿಯುಲ್ಲಾಯಿ ದರ್ಗಾ ಶರೀಫ್ನ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆದ ಉರೂಸ್ ಸಮಾರಂಭದಲ್ಲಿ ಧಾರ್ಮಿಕ ಉಪಾನ್ಯಾಸ ನೀಡಿದರು. ದುವಾವನ್ನು ಸ್ಥಳೀಯ ಖತೀಬ ಅಲ್ಹಾಜ್ ಮಹಮ್ಮದ್ ಆಶ್ರಫ್ ಫೈಝಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಟಿ.ಇ. ಆರೀಫ್ ತೆಕ್ಕಿಲ್ ವಹಿಸಿದ್ದರು. ಅತಿಥಿಗಳಾಗಿ ಹಾಜಿ ಇಸಾಕ್ ಬಾಖವಿ ಖತೀಬರು ಅರಂತೋಡು, ಎಂ.ಜಿ.ಎಂ. ಪೇರಡ್ಕ ಇದರ ಗೌರವಾಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್, ಸುಳ್ಯ ತಾಲೂಕು ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್, ಸುಳ್ಯ ತಾಲೂಕು ಎಸ್.ವೈ.ಎಸ್. ಅಧ್ಯಕ್ಷ ಹಮೀದ್ ಹಾಜಿ, ಅರಂತೋಡು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ಆಗಮಿಸಿದ್ದರು.
ವೇದಿಕೆಯಲ್ಲಿ ಎಂ.ಜಿ.ಎಂ. ಪೇರಡ್ಕ ಉಪಾಧ್ಯಕ್ಷ ಪಾಂಡಿ ಅಬ್ಬಾಸ್, ಎಸ್.ಕೆ.ಎಸ್.ಎಸ್.ಎಫ್. ಮಾಜಿ ಅಧ್ಯಕ್ಷ ಮುನೀರ್ ದಾರಿಮಿ, ಅಬ್ದುಲ್ ಅಝೀಝ್ ಝೈನಿ, ಟಿ.ಎಂ. ಬಶೀರ್ ತೆಕ್ಕಿಲ್, ಮಹಮೂದ್ ಹಾಜಿ, ಜಮಾಅತ್ ಕಾರ್ಯದರ್ಶಿ ಪಿ.ಕೆ. ಉಮ್ಮರ್ ಗೂನಡ್ಕ, ಮಾಜಿ ಅಧ್ಯಕ್ಷ ಆಲಿ ಹಾಜಿ, ಉರೂಸ್ ಸಮಿತಿ ಅಧ್ಯಕ್ಷ ಎನ್.ಹೆಚ್. ಹಾರೀಸ್, ಮೊದಲಾದವರು ಉಪಸ್ಥಿತರಿದ್ದರು. ಬಹು ಇರ್ಷಾದ್ ದಾರಿಮಿ ಅಲ್ ಜಝಾರಿ ಮಿತ್ತಬ್ಯೆಲು ಇವರ ನೇತೃತ್ವದಲ್ಲಿ ಮಜ್ಲಿಸ್ನ್ನೂರು ನಡೆಯಿತು. ಸದರ್ ಝಕರಿಯದಾರಿಮಿ ಸ್ವಾಗತಿಸಿದರು, ಅಬ್ದುಲ್ ಖಾದರ್ ಮೊಟ್ಟೆಂಗಾರ್ ವಂದಿಸಿದರು, ಜಿ.ಕೆ. ಹಮೀದ್ ಗೂನಡ್ಕ ಕಾರ್ಯಕ್ರಮ ನಿರೂಪಿಸಿದರು.