ಗುಡ್ಡೆಹೊಸೂರು, ಮಾ. 1: ಇಲ್ಲಿಗೆ ಸಮೀಪದ ಚಿಕ್ಲಿಹೊಳೆ ಜಲಾಶಯಕ್ಕೆ ಸಂಬಂಧಿಸಿದಂತೆ ಎಡದಂಡೆ ಮತ್ತು ಬಲದಂಡೆ ನಾಲೆ ವ್ಯಾಪ್ತಿಯ ಒಟ್ಟು 15 ಗ್ರಾಮಗಳಲ್ಲಿ ಹಾದುಹೋಗಿರುವ ನಾಲೆಯ ಒಳಗಿರುವ ಹೂಳು ಮತ್ತು ಕಾಡನ್ನು ಕಡಿಯುವಂತೆ ರೈತರು ಮತ್ತು ಕುಶಾಲನಗರ ಯುವ ಬಿ.ಜೆ.ಪಿ ಘಟಕ ಒತ್ತಾಯಿಸಿದೆ. ಭತ್ತದ ಗದ್ದೆಗಳಿಗೆ ನೀರು ನೀಡಲು ಪ್ರತಿವರ್ಷ ಸರಕಾರ ಹಾಗೂ ಇಲಾಖಾಧಿಕಾರಿಗಳು ವಿಫಲರಾಗುತ್ತಾರೆ. ಆದರೆ ಈ ಬಾರಿ ಈ ರೀತಿಯಾಗಬಾರದು. ಬೇಸಿಗೆಯಲ್ಲೆ ನಾಲಾ ವ್ಯಾಪ್ತಿಯ ಕಾಡು ಕಡಿದು ಹೂಳೆತ್ತುವಂತೆ ಸೋಮವಾರಪೇಟೆ ತಾಲೂಕು ಯುವ ಮೋರ್ಚಾದ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ಯುವ ಮೋರ್ಚಾದ ಹಾಗೂ ಕುಶಾಲನಗರ ಅಧ್ಯಕ್ಷ ಕೆ.ಜಿ. ಮನು, ಬಿ.ಜೆ.ಪಿ. ಮುಖಂಡ ಅಂಬಾಡಿರವಿ ಈ ವಿಭಾಗದ ರೈತರಾದ ಗಣೇಶ್, ಮನು, ಕಂದಮಣಿ, ಪ್ರಭಾಕರ್ ಮುಂತಾದವರು ಒತ್ತಾಯಿಸಿದ್ದಾರೆ.