ಮಡಿಕೇರಿ, ಮಾ.1: ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ದೇಶಪ್ರೇಮಿ ಯುವಕ ಸಂಘ ಕಡಗದಾಳು ಸರಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನಾ ಘಟಕ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಷಯಾಧಾರಿತ ಶಿಕ್ಷಣ ಜಾಗೃತಿ ಕಾರ್ಯಕ್ರಮ ವಿಚಾರವಾಗಿ ವಿದ್ಯಾರ್ಥಿ ಯುವ ಪೀಳಿಗೆಗೆ ಉಪನ್ಯಾಸ ನೀಡಲಾಯಿತು.
ಈ ಕಾರ್ಯಕ್ರಮವನ್ನು ಪದವಿ ಕಾಲೇಜಿನ ಮುಖ್ಯಸ್ಥ ಶಶಿಧರ್ ಉದ್ಘಾಟಿಸಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಜೀವನದಲ್ಲಿ ಗುರಿಯನ್ನು ಹೊಂದಿರಬೇಕು. ಆ ಗುರಿಯನ್ನು ಮುಟ್ಟುವ ಮೂಲಕ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕೆಂದು ನುಡಿದರು. ಮಾದೇಟಿರ ತಿಮ್ಮಯ್ಯ ಮಾತನಾಡಿ ಆದುನಿಕ ಜಗತ್ತಿನ ಶಿಕ್ಷಣ ಮತ್ತು ಉದ್ಯೋಗದ ಮಹತ್ವ ಕುರಿತಾಗಿ ಮಾರ್ಗದರ್ಶನ ನೀಡಿದರು.
ಪದವಿ ಕಾಲೇಜಿನ ಪ್ರಾಂಶುಪಾಲೆ ಚೈತ್ರ. ವೈ. ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕೌಶಲ್ಯತೆಯನ್ನು ಸಹ ಬೆಳೆಸಿಕೊಳ್ಳಬೇಕು. ಎಂಬುದಾಗಿ ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದ ಅಂಗವಾಗಿ ಆಯುಷ್ ಇಲಾಖೆಯ ಅಧಿಕಾರಿ ಪಲ್ಲವಿ ನಾಯಕ್ ಆಯುಷ್ ಇಲಾಖೆಯ ವಿಚಾರಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಕೆ.ಸಿ.ದಯಾನಂದ ಮತ್ತು ಸಂಸ್ಥೆಯ ಮುಖ್ಯಸ್ಥರಾದ ಧನಂಜಯ್ ಅಗೋಳಿಕಜೆ ಕಾರ್ಯಕ್ರಮದ ಮಹತ್ವತೆಯ ಕುರಿತಾಗಿ ಉಪನ್ಯಾಸ ನೀಡಿದರು.
ದೇಶ ಪ್ರೇಮಿ ಯುವಕ ಸಂಘದ ಅದ್ಯಕ್ಷ ವಿಶ್ವನಾಥ್, ರಾಷ್ಟ್ರೀಯ ಸೇವಾ ಕಾರ್ಯಕರ್ತರಾದ ದೀಪ್ತಿ, ಮಿಥುನ್, ಮೇರಿ, ಉಪಸ್ಥಿತರಿದ್ದರು. ದೇಶ ಪ್ರೇಮಿ ಯುವಕ ಸಂಘದ ತ್ಯಾಗರಾಜ್ ಸ್ವಾಗತಿಸಿ,ಅರುಣ್ ಕುಮಾರ್ ಪಿ. ನಿರೂಪಿಸಿ, ಮಿಥುನ್ ವಂದಿಸಿದರು.